Kishore Kumar Hits

Amrutha - Ee Khali Hrudhayake şarkı sözleri

Sanatçı: Amrutha

albüm: Simha Hakida Hejje


ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ
ಬಾನಲ್ಲಿ ಚಂದ್ರ ಚಂದ
ನದಿಗಿಂತ ನೀನು ಅಂದ
ಕವಿ ಬರೆದ ಕಾವ್ಯ ಅಂದ
ನನಗೆಂದೂ ನೀನೇ ಅಂದ
ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ

ಹೇಳೋಕ್ಕಾಗದ ರೀತಿ
ತಿಳಿಸೋಕ್ಕಾಗದ ಪ್ರೀತಿ
ಕಲಿತೆ ನಿನ್ನಿಂದ ನಾನು ಈ ದಿನ
ಮುಳುಗೂ ಸೂರ್ಯನ ನೋಡಿ
ಮನವಿ ಮಾಡಿದೆ ಕಾಡಿ
ತಡವಾಗಿ ಹೋಗು ಎಂದು ನೀನು ಪ್ರತಿದಿನ
ಮನಸೆಲ್ಲೋ ಕರೆದರೂ ನಾ ನಿನ್ನ ಕೈ ಸೆರೆ
ಕೊನೆವರೆಗೂ ಆಸರೆ ಈ ಜೀವ ಇದ್ದರೆ
ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನದೇ

ಮಲ್ಲಿಗೆ ಮಂಟಪದಲ್ಲಿ ನಿನ್ನ ಕೊರಳಿಗೆ ಮಾಲೆ ಹಾಕಿ
ಕಣ್ಣೀರನ್ನು ಒರೆಸುವೆನು ನಿನ್ನವನಾದರೆ
ನಮ್ಮಿಬ್ಬರ ಪ್ರೀತಿಯ ನೋಡಿ
ಬಾನಲ್ಲಿರೋ ಚಂದಿರ ಹಾಡಿ
ಬೆಳದಿಂಗಳ ಕಳುಹಿಸಿದ ನಮ್ಮನು ಕಾಯಲು
ಮುಳ್ಳಾಗಿ ಕಾಯುವೆ ನನ್ನಾಸೆ ರೋಜಾ ನೀ
ನನ್ನೆದೆಯ ಒಲವಿಗೆ ಚಿತ್ತಾರ ಚೆಲುವೆ ನೀ
ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ
ಬಾನಲ್ಲಿ ಚಂದ್ರ ಚಂದ
ನದಿಗಿಂತ ನೀನು ಅಂದ
ಕವಿ ಬರೆದ ಕಾವ್ಯ ಅಂದ
ನನಗೆಂದೂ ನೀನೇ ಚಂದ
ಈ ಖಾಲಿ ಹೃದಯಕೆ
ನೀ ಲಾಲಿ ಹಾಡಿದೆ
ನನ್ನೆಲ್ಲಾ ಸಮಯಕೂ ಮನಸಾಯ್ತು ನಿನ್ನಲೇ

Поcмотреть все песни артиста

Sanatçının diğer albümleri

Benzer Sanatçılar