Kishore Kumar Hits

K. V. Mahadevan - Karnatakada Itihaasadali şarkı sözleri

Sanatçı: K. V. Mahadevan

albüm: Krishna Rukmini


ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಕರ್ನಾಟಕದ ಇತಿಹಾಸದಲಿ
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿ ಇದು
ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿ ಇದು
ಹಕ್ಕ ಬುಕ್ಕರು ಆಳಿದರಿಲ್ಲಿ, ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ
ವಿಜಯದ ಕಹಳೆಯ ಊದಿದರು
ವಿಜಯನಗರ ಸ್ಥಾಪನೆ ಮಾಡಿದರು
(ಕರ್ನಾಟಕದ ಇತಿಹಾಸದಲಿ
ಬಂಗಾರದ ಯುಗದ ಕಥೆಯನ್ನು)
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಹಾಡುವೆ ಕೇಳಿ ನಾ ಹಾಡುವೆ ಕೇಳಿ
ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವತೆ
ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವತೆ
ಕಲಿಗಳ ನಾಡು ಕವಿಗಳ ಬೀಡು
ಕಲಿಗಳ ನಾಡು ಕವಿಗಳ ಬೀಡು
ಎನಿಸಿತು ಹಂಪೆಯು ಆ ದಿನದೇ
ಕನ್ನಡ ಬಾವುಟ ಹಾರಿಸಿದ
ಮಧುರೆವರೆಗೂ ರಾಜ್ಯವ ಹರಡಿಸಿದ
ಕರ್ನಾಟಕದ ಇತಿಹಾಸದಲಿ
ಸಂಗೀತ ನಾಟ್ಯಗಳ ಸಂಗಮವಿಲ್ಲೇ
ಶಿಲ್ಪ ಕಲೆಗಳ ತಾಣವಿದೆ
ಸಂಗೀತ ನಾಟ್ಯಗಳ ಸಂಗಮವಿಲ್ಲೇ
ಶಿಲ್ಪ ಕಲೆಗಳ ತಾಣವಿದೆ
ಭುವನೇಶ್ವರಿಯ ತವರೂರಿಲ್ಲೇ
ಯತಿಗಳ ದಾಸರ ನೆಲೆನಾಡಿಲ್ಲೇ
ಪಾವನ ಮಣ್ಣಿದು ಹಂಪೆಯದು
ಯುಗ ಯುಗ ಅಳಿಯದ ಕೀರ್ತಿ ಇದು
ಕನ್ನಡ ಭೂಮಿ ಕನ್ನಡ ನುಡಿಯು
ಕನ್ನಡ ಪ್ರೀತಿ ಎಂದೆಂದೂ ಬಾಳಲಿ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ

Поcмотреть все песни артиста

Sanatçının diğer albümleri

Benzer Sanatçılar