Kishore Kumar Hits

Vidhya - O Nanna Preethiya Geleya şarkı sözleri

Sanatçı: Vidhya

albüm: Samaagama


ಓ ನನ್ನ ಪ್ರೀತಿಯ ಗೆಳೆಯ
ಬಾ ನನ್ನ ಬಾಳ ನೆಲೆಗೆ
ಪ್ರೀತಿಯನು ಧಾರೆ ಎರೆವೆ
ಬಾ ಸೇರೋ ಜೀವದ ಸೆಲೆಗೆ
ಸ್ನೇಹದ ಸಿಂಚನದಲ್ಲಿ
ಚಿಗುರೊಡೆದ ಬಳ್ಳಿಯಲ್ಲಿ
ಪ್ರೀತಿಯ ಗಂಧ ಚೆಲ್ಲಿ
ಅರಳಿರುವ ಹೂಗಳೆಲ್ಲಾ
ನಿನಗರ್ಪಣೆ ಸಖ ನಿನಗರ್ಪಣೆ
ಸಹನೆಯಲಿ ಧಾರುಣಿ ಆಗಿ
ಸರಸದಲಿ ಪ್ರೇಯಸಿ ಆಗಿ
ಕಾರ್ಯದಲ್ಲಿ ದಾಸಿ ಆಗುವೆ
ನಿನ್ನೊಲವನೆಲ್ಲಾ ಗಳಿಸುವೆ
ಬಾ ನನ್ನ ದೊರೆಯೇ ಸನಿಹಕೆ
ಬಾ ನನ್ನ ಬಾಳಿನ ಬೆಳಕೆ
ನನ್ನ ಒಲವ ಭಾವಾಗಳೆಲ್ಲಾ
ನಿನಗರ್ಪಣೆ ಸುಖ ನಿನಗರ್ಪಣೆ
ಹಃ. ಹಃ. ಮಮತೆಯಲಿ ಮಾತೆ ಆಗಿ
ರೂಪದಲಿ ದೇವಿ ಆಗಿ
ಜೀವ ಸಖಿ ನಾನಾಗುವೆ
ನಿನ್ನೊಲುಮೆಯಲ್ಲಿ ಮಾಗುವೆ
ಬಾ ನನ್ನ ಉಸಿರೇ ಬದುಕಿಗೆ
ಬಾ ನನ್ನ ಭಾವದ ಸೇಳಕೆ
ಈ ನನ್ನ ಮೈ ಮನಸ್ಸೆಲ್ಲಾ
ನಿನಗರ್ಪಣೆ ಸಖ ನಿನಗರ್ಪಣೆ
ಓ ನನ್ನ ಪ್ರೀತಿಯ ಗೆಳೆಯ
ಬಾ ನನ್ನ ಬಾಳ ನೆಲೆಗೆ
ಪ್ರೀತಿಯನು ಧಾರೆ ಎರೆವೆ
ಬಾ ಸೇರೋ ಜೀವದ ಸೆಲೆಗೆ
ಸ್ನೇಹದ ಸಿಂಚನದಲ್ಲಿ
ಚಿಗುರೊಡೆದ ಬಳ್ಳಿಯಲ್ಲಿ
ಪ್ರೀತಿಯ ಗಂಧ ಚೆಲ್ಲಿ
ಅರಳಿರುವ ಹೂಗಳೆಲ್ಲಾ
ನಿನಗರ್ಪಣೆ ಸಖ ನಿನಗರ್ಪಣೆ

Поcмотреть все песни артиста

Sanatçının diğer albümleri

Benzer Sanatçılar