ಒಂದಾನೊಂದು ಊರಲಿ ಒಬ್ಬ ರಾಜನಿದ್ದನು ಊರ ಮನೆಮನೆಯ ಬೆಳಕಾಗೇ ಇದ್ದನು ಜನಕ್ಕಾಗೆ ಕನಸ ಕೋಟೆ ಕಟ್ಟಿದ ನಂಬಿ ಬಂದ ಜನಕೆ ಪ್ರಾಣ ಒತ್ತೆ ಇಟ್ಟನು ನಾನು, ನನ್ನದೆನ್ನುವ ಆಸೆ ಕಟ್ಟಿ ಇಟ್ಟನು ಅವನೇ ನಮ್ಮ ಮಣ್ಣಿನ ಮಗ ಅಳಿಯದು ಹೆಸರು ನೂರು ಯುಗ ಜನರೇ ಮೆಚ್ಚಿದ ಬಂಗಾರದ ಮನುಷ್ಯ ಒಂದಾನೊಂದು ಊರಲಿ ಒಬ್ಬ ರಾಜನಿದ್ದನು ಊರ ಮನೆಮನೆಯ ಬೆಳಕಾಗಿ ಇದ್ದನು ♪ ಒಂದು ಮುತ್ತಿನ ಕಥೆ, ಮುತ್ತುರಾಜನ ಕಥೆ ನೀ ಹೋಗೋ ದಾರಿಗೆ ಹೂ ಬಿತ್ತಿದ ಕಥೆ ನೀ ನಾಳೆ ನಂಬಿ ಬದುಕೋ, ಕಂದ ಯುವರಾಜ ನೀನು ರಾಜವಂಶದವನು ಒಳ್ಳೆತನ ಇರುವ ಒಳ್ಳೆ ಮನೆಯವನು ಕಾದರು ನೋಡಲು ನಿನ್ನ ಮುಖ ತಿಳಿಯೋ ಅವರ ಕಷ್ಟ ಸುಖ ಭೋಗವ ಬಿಟ್ಟವ ಬಂಗಾರದ ಮನುಷ್ಯ ಒಂದಾನೊಂದು ಊರಲಿ ಒಬ್ಬ ರಾಜನಿದ್ದನು ಊರ ಮನೆಮನೆಯ ಬೆಳಕಾಗಿ ಇದ್ದನು