Vishnuvardhan - Devaru Hoseda Premada Daara şarkı sözleri
Sanatçı:
Vishnuvardhan
albüm: Mutthina Haara
ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ
♪
ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ
ಪ್ರೇಮಕೂ ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ
ಬೇಡ ಏಂದರೆ ನಾವು
ಸುಡದೇ ಇರುವುದೇ ನೋವು
ಸರಿಯೋ ಕಾಲದ ಜೊತೆಗೆ
ವ್ಯಸನ ನಡೆವುದು ಹೊರಗೆ
ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ
♪
ಮೇಘವೋ ಮೇಘವೋ
ಮುಂಗಾರಿನ ಮೇಘವೋ
ಮೇಘವೋ ಮೇಘವೋ
ಹಿಂಗಾರಿನ ಮೇಘವೋ
ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡು ಗುಡು ಗುಡು ಗುಡು ಗುಡುಗೋ ಗುಡುಗಿನ
ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ
ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ
ಸಿಡಿಯುವ ಭೂಮಿಗೆ ಗಂಗಾವಾಹಿ
ಉರಿಯುವ ಪ್ರೇಮಕೆ ಅಮೃತವರ್ಷಿಣಿ
♪
ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೇ
ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೇ
ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು
(ಕೂಹು ಕೂಹು
ಕೂಹು ಕೂಹು
ಕೂಹು
ಕೂಹು
ಕೂಹು
ಕೂಹು)
ಋತುಗಳ ಚಕ್ರವು ತಿರುಗುತ ಇರಲು
ಕ್ಷಣಿಕವೇ ಕೋಗಿಲೆ ಗಾನದ ಹೊನಲು
♪
ಬಿಸಿಲೋ ಮಳೆಯೋ
ಚಿಗುರೋ ಹಿಮವೋ
ಅಳುವೋ ನಗುವೋ ಸೊಲೋ ಗೆಲುವೋ
ಬದುಕೇ ಪಯಣ ನಡಿಯೇ ಮುಂದೆ
ಒಲವೇ ನಮಗೆ ನೆರಳು ಹಿಂದೆ
ದೇವರು ಹೊಸೆದ ಪ್ರೇಮದ ದಾರ
ದಾರದಿ ಬೆಸೆದ ಋತುಗಳ ಹಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ
Поcмотреть все песни артиста
Sanatçının diğer albümleri