ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ ಪ್ರೀತಿ ಉಂಡ ಮನಸಿಗೆ ಯಾಕೋ ಸುಖದ ತಂಪಿಲ್ಲ ಪ್ರೇಮ ಗಂಗೆ ನೀಡು ಬಾ ಅಂತರಂಗ ತೋಟಕೆ ಪಚ್ಚ ಹಸಿರು ಕಾಣದ ನನ್ನ ಬಾಳ ದಾರಿಗೆ ಪ್ರಾಣ ಓ ಓ ಜ್ಯೋತಿ ಓ ಓ ನಲ್ಲ ನಿನ್ನ ಪ್ರೀತಿ ಕೂಗು ಇನ್ನು ಬರಲಿಲ್ಲ ನಿನ್ನ ಹೊತ್ತ ಮನಸು ಯಾಕೋ ಕಣ್ಣ ತೆರದಿಲ್ಲ ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ ಪ್ರೇಮ ಗಂಗೆ ಇಲ್ಲದ ಮರಳು ರಾಶಿಯಾಗಿದೆ ಜೀವ ನಾನು ಭಾವ ನೀನು (ಅನಿಲ್ ಬೆಳವಡಿ) ಆ ಆ ಆ ಆ ಆ ಆ ಆ ಆ ಆ ಆ ಆ ಆ ಗಿರಿಜೆಯ ಹೃದಯವೇ ಶಿವನಿಗೆ ಎಂದು ಪ್ರೇಮದ ಗುಡಿಯಮ್ಮ ಹಗಲಿರುಳೆರಡು ಅವಳೆದೆಯಲ್ಲಿ ಉದಾಯಸ್ತಮವಮ್ಮ ಶಿವನ ಪೂಜೆಗೆಂದಿಗೂ ಅವಳೇ ಹೂವ ಮಾಲಿಕೆ ಪತಿಯೇ ಅವಳ ಪ್ರಾಣವು ಹೂವೆ ಏಕೀ ನೋವು ಉ ಉ ನೋವಿದೆ ನಲ್ಲ ಹಿತವಾಗಿದೆಯಲ್ಲ ಹತ್ತಿರವಿದ್ದರು ನೀ ಅಂತರವಿದೆಯಲ್ಲಾ ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲಾ ನಿನ್ನ ಹೊತ್ತ ಮನಸು ಯಾಕೋ ಕಣ್ಣಾ ತೆರೆದಿಲ್ಲ (ಅನಿಲ್ ಬೆಳವಡಿ) ಆ ಆ ಆ ಆ ಆ ಆ ಆ ಆ ಆ ಆ ಆ ಆ ದೇಹಕು ಉಸಿರಿಗು ಬ್ರಹ್ಮ ನು ಬೆಸೆದನು ಅಗಲಿಸದಾ ನಂಟು ನನ್ನಲಿ ನಿನ್ನನು ಬಂಧಿಸಿ ಹೂಸೆದ ಜನ್ಮಗಳ ಗಂಟು ಬ್ರಹ್ಮ ಮುನಿಸಿಕೊಂಡರು ಬೆಸುಗೆ ಬಿಡಿಸಲಾಗದು ಮೌನ ಮುರಿದ ಆ ಕ್ಷಣ ಬಾಳೆ ಜೇನ ಕಡಲೂ ಜೇನಿದೆ ನಲ್ಲಾ ಸಿಹಿಯಾಗಿದೆಯಲ್ಲಾ ಹತ್ತಿರವಿದ್ದರು ನೀ ಅಂತರವಿದೆಯಲ್ಲಾ ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲಾ ಪ್ರೀತಿ ಉಂಡ ಮನಸಿಗೆ ಯಾಕೋ ಸುಖದಾ ತಂಪಿಲ್ಲಾ ನಲ್ಲಾ ನಿನ್ನ ಪ್ರೀತಿ ಕೂಗು ಇನ್ನೂ ಬರಲಿಲ್ಲಾ ನಿನ್ನ ಹೊತ್ತ ಮನಸು ಯಾಕೋ ಕಣ್ಣ ತೆರೆದಿಲ್ಲಾ ಪ್ರೇಮ ಗಂಗೆ ನೀಡು ಬಾ ಅಂತರಂಗ ತೋಟಕೇ ಅಂತರಂಗ ತೋಟವೇ ಬೆಂಕಿ ಜ್ವಾಲೆಯಾಗಿದೆ ಜೀವ ನಾನು ಭಾವ ನೀನು ಆ ಆ ಆ ಆ ಆ ಆ ಆ ಆ ಆ ಆ ಆ ಆ End