ಜೋ ಜೋ ಯಶೋದೆಯ ನಂದ ಮುಕುಂದನೇ ಜೋ ಜೋ ಕಂಸ ಕುಠಾರಿ ಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ ಜೋ ಜೋ ಲಕುಮಿಯ ರಮಣ (ಜೋ, ಜೋ, ಜೋ, ಜೋ) ಹೊಕ್ಕಳ ಹೂವಿನ ತಾವರೆಗಣ್ಣಿನ ಇಕ್ಕಿಟ್ಟ ಮಕರಕುಂಡಲದ ಜಕ್ಕರಿಸುವ ಕದಪಿನ ಸುಳಿಗುರುಳಿನ ಚಿಕ್ಕ ಬಾಯಿ ಮುದ್ದು ಮೊಗದ ಸೊಕ್ಕಿದ ಮದಕರಿಯಂದದಿ ನೊಸಲಲಿ ಇಕ್ಕಿದ ಕಸ್ತೂರಿ ತಿಲಕ ರಕ್ಕಸರೆದೆದಲ್ಲಣ ಮುರವೈರಿಯೆ ಮಕ್ಕಳ ಮಾಣಿಕ ಜೋ ಜೋ ಮಕ್ಕಳ ಮಾಣಿಕ ಜೋ ಜೋ (ಜೋ, ಜೋ, ಜೋ, ಜೋ) ಕಣ್ಣ ಬೆಳಗು ಪಸರಿಸಿ ನೋಡುತ ಅರೆಗಣ್ಣ ಮುಚ್ಚಿ ನಸುನಗುತ ಸಣ್ಣ ಬೆರಳು ಬಾಯೊಳು ಢವಳಿಸುತ ಪನ್ನಗಶಯನ ನಾಟಕದಿ ನಿನ್ನ ಮಗನ ಮುದ್ದು ನೋಡೆನುತ ಗೋಪಿ ತನ್ನ ಪತಿಗೆ ತೋರಿದಳು ಚಿನ್ನತನದ ಸೊಬಗಿನ ಖಣಿಯೇ ಹೊಸ ರನ್ನ ಮುತ್ತಿನ ಬೊಂಬೆ ಜೋ ಜೋ ಮುತ್ತಿನ ಬೊಂಬೆ ಜೋ ಜೋ (ಜೋ, ಜೋ, ಜೋ, ಜೋ) ಬಿಡಿತೋಳ್ಗಳ ಪಸರಿಸುತಲಿ ಗೋಪಿಯ ತೊಡೆ ಮೇಲ್ ಮಲಗಿ ಬಾಯ ತೆರೆಯೆ ಒಡಲೊಳು ಚತುರ್ದಶ ಭುವನವಿರಲು ಕಂಡು ನಡುನಡುಗಿ ಕಣ್ಣ ಮುಚ್ಚಿದಳು ತಡೆಯದೆ ಅಡಿಗಳನಿಡುತಲಿ ಬಂದು ಮದದೇರ ಮುಖವ ನೋಡುತ ನಿಂದು ಕಡು ದಯಾಸಾಗರ ಪುರಂದರ ವಿಠಲ ಬಿಡದೆ ರಕ್ಷಿಸು ಎನ್ನ ಸಲಹಬೇಕೆಂದು ಬಿಡದೆ ರಕ್ಷಿಸು ಎನ್ನ ಸಲಹಬೇಕೆಂದು ಜೋ ಜೋ ಯಶೋದೆಯ ನಂದ ಮುಕುಂದನೇ ಜೋ ಜೋ ಕಂಸ ಕುಠಾರಿ ಜೋ ಜೋ ಮುನಿಗಳ ಹೃದಯಮಂದಿರ ಜೋ ಜೋ ಲಕುಮಿಯ ರಮಣ ಜೋ ಜೋ ಲಕುಮಿಯ ರಮಣ (ಜೋ, ಜೋ, ಜೋ, ಜೋ) (ಜೋ, ಜೋ, ಜೋ, ಜೋ)