Kishore Kumar Hits

Nakul - Doora Doora şarkı sözleri

Sanatçı: Nakul

albüm: Preethiya Raayabhari


ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ದಾರಿ ಮಧ್ಯೆ ನೀ ಕತ್ತಲಾದಾಗ ಬೇರೆ ಏನಿಲ್ಲ ದೀಪವಾಗು ನೀ
ಉತ್ತರವನ್ನು ನೀಡುತ್ತ ಕಣ್ಣಲಿ ಉತ್ಸಹವನ್ನು ತುಂಬು ನೀ ನನ್ನಲಿ
ಸಾಂತ್ವಾನ ನೀಡಿದ ಈ ಹುಚ್ಚು ಸಂತೆಲಿ
ಈ ನಿನ್ನ ಪ್ರೀತಿ ಒಂದೇ ನನ್ನ ಸಂಜೀವಿನಿ
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ಕಾಡುತ್ತಿದೆ ಸಮಯ ಸಾಧಿಸಿ ಜಗ ಹೀಗೇಕೆ ಮುಖವಾಡ ಧರಿಸಿ
ಈ ನೋವಿಗೆ ಕೊನೆಯೆ ಇಲ್ಲವೆ ದಿನಕ್ಕೊಂದೊಂದು ಅವಮಾನ ಸಹಿಸಿ
ಬದಲಾದೀತೆ ಎಲ್ಲಾ ಎಂದಾದರು
ಸದಾ ನೋಡುವಂತ ಆಕಾಶ ಭೂಮಿ ಸಾಕ್ಷಿಯನ್ನು ನೀಡ ಬನ್ನಿ ನೀವಾದರು
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ
ಈ ತಂಗಾಳಿಯು ಬಿಡದೇ ಬೀಸಲಿ ಹೊಸದಾದಂತ ಪುಟವನು ತೆರೆದು
ಈ ಬಾಳಿನ ಗ್ರಹಣ ನೀಗಲಿ ಎದುರಾದಂತ ನೆರಳಲಿ ಸರಿದು
ಬೆಳಕಾದೀತೆ ಎಲ್ಲಾ ಹೇಗಾದರು
ಸಮಾಧಾನದಿಂದ ವಿಶ್ವಾಸದಿಂದ ದೈರ್ಯವನ್ನು ಹೇಳಬನ್ನಿ ಯಾರಾದರು
ದೂರ ದೂರಾ ನೀ ಯಾಕೆ ನಿಂತೆ ನೀ
ಮೌನದಲ್ಲೇ ನೀ ಮಾತನಾಡೆ ನೀ

Поcмотреть все песни артиста

Sanatçının diğer albümleri

Benzer Sanatçılar