Kishore Kumar Hits

Sonu Nigam - Ondu Malebillu şarkı sözleri

Sanatçı: Sonu Nigam

albüm: Chakravarthy


ಒಂದು ಮಳೆಬಿಲ್ಲು, ಒಂದು ಮಳೆಮೋಡ
ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ, ಭಾವನೆ ಬಾಕಿ ಇದೆ

ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ
ಮುದ್ದಾಗಿ ಸೇರಿವೆ ಎರಡು ಸಹ
ಏನನೋ ಮಾತಾಡಿವೆ, ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು, ಒಂದು ಮಳೆಮೋಡ
ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ

ಸನ್ನೆಗಳಿಗೆ ಸೋತ ಕಣ್ಣುಗಳಿವೆ
ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ
ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂಥಾ ಆವೇಗ ಈ ತವಕ
ಸೇರೋ ಸಲುವಾಗಿ, ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ
ಪ್ರೀತಿಗೆ ಒಂದ್ ಹೆಜ್ಜೆ ಮುಂದಾಗಿವೆ
ಏನನೋ ಮಾತಾಡಿವೆ, ಯಾತಕೆ ಹೀಗಾಗಿದೆ
ಒಂದು ಮಳೆಬಿಲ್ಲು, ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ್ಯ ಬಳೆ
ಮಂಚ ನೋಡುತಿದೆ ಬೀಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಲೆ
ದೀಪ ಮಲಗುತಿದೆ ನೋಡಿ ಈ ರಗಳೆ
ತುಂಬಾ ಹೊಸದಾದ ಈ ಕಥನ
ಒಮ್ಮೆ ನಿಶಬ್ಧ, ಒಮ್ಮೆ ಸಿಹಿಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ
ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ... ಹ್ಮ್ಮ್ಮ್
ಮಾತಲೇ ಮುದ್ದಾಡಿವೆ
ಒಂದು ಮಳೆಬಿಲ್ಲು, ಒಂದು ಮಳೆಮೋಡ
ಹೇಗೋ ಜೊತೆ ಆಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ, ಭಾವನೆ ಬಾಕಿ ಇದೆ

Поcмотреть все песни артиста

Sanatçının diğer albümleri

Benzer Sanatçılar