Hamsalekha - Sai Sai Preethsai (From "Preethse") şarkı sözleri
Sanatçı:
Hamsalekha
albüm: Naanu Nimmavanu Hamsalekha
ಆ... ಆ... ಆ... ಆ... ಆ...
ಈ ನಯನವು ಸೈ, ಈ ಅಧರವು ಸೈ
ಈ ದಂತದ ಮೈ, ರತಿ ದೇವಿಗೂ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಈ ಸನ್ನೆಯು ಸೈ, ಈ ಕಿರುನಗೆ ಸೈ
ಈ ಪ್ರೀತಿಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ
ಕರಿ ಹುಬ್ಬ ಹಬ್ಬ ಸೈ ಸೈ
ಎದೆಗಾರನೆದೆಗು ಎದೆ ಸೈ
ಬಿಸಿ ಉಸಿರ ಕದನಕು ಸೈ
ಬರಿ ರಾಗವದ್ರು ಸೈ
ತಾಳವಾದ್ರು ಸೈ
ಗಮಕವಾದ್ರು ಸೈ
ವಚನವಾದ್ರು ಸೈ
ಪ್ರೀತಿಸೆ ಸೈ...
ಆ... ಆ... ಆ... ಆ... ಆ...
ನಾ ಸೋಲಲು ಸೈ, ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಬಯಸಿ ಬಯಸಿ ಕಾದು ಪಡೆಯೋ
ಸುಖದ ಸವಿ ಸುಖವೈ
ಭಂದಿಸೈ, ಚುಂಬಿಸೈ ಸುಖದ ನೆನಪಿರಲಿ
ಕರುಣಿಸೈ ನಿನ್ನ ಈ ಪುಟ್ಟ ರೂಪ ನನಗಿರಲಿ
ಕನಸಿನ ಕಡಲ ತೀರದಲ್ಲಿ ಒಲವಿನ ದೀಪ
ನೀನೆ ಸೈ ಸ್ವೀಕರಿಸೈ ಗೆಲುವಿನ ಹೆಸರು
ನಿನ್ನಾ ಈ ಹೆಸರಲ್ಲಿ ಈಜಾಡಿದೆ ನನ್ನುಸಿರು
ಹೊರನಾಡಲಿದ್ರು ಸೈ
ನಾಡಲಿದ್ರು ಸೈ
ವಿರಹವಿದ್ರು ಸೈ
ಸನಿಹವಿದ್ರು ಸೈ, ಪ್ರೀತಿಸೇ ಸೈ...
ಆ... ಆ... ಆ... ಆ... ಆ...
ಈ ನಯನವು ಸೈ, ಈ ಅಧರವು ಸೈ
ಈ ದಂತದ ಮೈ, ರತಿ ದೇವಿಗೂ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಲೋಕದ ಪ್ರೀತಿಯ ಕಾವ್ಯಗಳಲ್ಲಿ
ಕೊನೆಯ ಪುಟ ವಿರಹ
ಬದಲಿಸೈ ಬದಲಿಸೈ ಹಳೆಯ ಪರಿಹಾಸಾ...
ಸೃಷ್ಟಿಸೈ ಪ್ರೀತಿಗೆ ಸುಖದ ಇತಿಹಾಸ
ಋತುಗಳ ನಡುವೆ ಬೆಳೆದಿದೆ ಒಂದು
ಸುಂದರ ಸ್ನೇಹಾ...
ಆಲಿಸೈ ಪಾಲಿಸೈ ಸ್ನೇಹದ ನೇಮ
ಕಾಯುತ ಸಾಗುತ ಪಡೆಯುತ ನಿಜ ಪ್ರೇಮಾ
ನಿಜ ಪ್ರೇಮವಾದ್ರು ಸೈ
ಸ್ನೇಹವಾದ್ರು ಸೈ
ಸ್ನೇಹ ಪ್ರೇಮ ಪದ
ಬದಲಿ ಆದ್ರೂ ಸೈ, ಪ್ರೀತಿಸೇ ಸೈ...
ಆ... ಆ... ಆ... ಆ... ಆ...
ಈ ನಯನವು ಸೈ, ಈ ಅಧರವು ಸೈ
ಈ ದಂತದ ಮೈ, ರತಿ ದೇವಿಗೂ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಈ ಸನ್ನೆಯು ಸೈ, ಈ ಕಿರುನಗೆ ಸೈ
ಈ ಪ್ರೀತಿಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ
ಕರಿ ಹುಬ್ಬ ಹಬ್ಬ ಸೈ ಸೈ
ಎದೆಗಾರನೆದೆಗು ಎದೆ ಸೈ
ಬಿಸಿ ಉಸಿರ ಕದನಕು ಸೈ
ಬರಿ ರಾಗವದ್ರು ಸೈ
ತಾಳವಾದ್ರು ಸೈ
ಗಮಕವಾದ್ರು ಸೈ
ವಚನವಾದ್ರು ಸೈ
ಪ್ರೀತಿಸೆ ಸೈ...
ಆ... ಆ... ಆ... ಆ... ಆ...
ನಾ ಸೋಲಲು ಸೈ, ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
Поcмотреть все песни артиста
Sanatçının diğer albümleri