Kishore Kumar Hits

Veer Samarth - Kashta Patt şarkı sözleri

Sanatçı: Veer Samarth

albüm: Paradesi Co London


ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು
ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು
ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು
ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು
ಕತ್ತಲೆ ಕೋಣೆಯ ಒಳಗೆ
ಬರಿ ನೆರಳು ಬೆಳಕಿನ ಆಟ
ಚಪ್ಪಾಳೆ ಬಿದ್ದರೆ ಗೆಲುವು
ಇಲ್ದಿದ್ರೆ ಬಗಣಿ ಗೂಟ
ಜಗ ನಗಿಸುವೆವು ತುಸು ಅಳಿಸುವೆವು
ಬೇರೆ ಕೆಲಸ ನಮಗಿಲ್ಲ
ಇದು ಪರಮಸುಖ, ಬರಿ ಜಿಂಗಿಚಕ
ನಮಗಿನ್ನೇನು ಬರೋದಿಲ್ಲ
ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು
ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು

ಶುರುವಾಗದ cinemaಗೆ ಕಥೆಯೊಂದ
ಬರೆದಿಡುವೆವು ದಿನ ರಾತ್ರಿ
ಶುರುವಾತಲೇ ನಿಂತಿದೆ shooting-u
ಇದು ಕನಸಿನ ಶವಯಾತ್ರೆ
Picture ಕಥೆಗಿಂತ ಯಡವಟ್ಟು ನಮ್ಮ ಕಥೆ
ಇರುವುದಿಲ್ಲ ನೆರಳು ಕೆಲವೊಮ್ಮೆ ನಮ್ಮ ಜೊತೆ
ಈ ಬಣ್ಣಗಳ ಬರಿ ಸಂತೆಯಲಿ ನಮಗೇನೇ ನಾವು ಸಿಗುತಿಲ್ಲ
ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು
ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು

Make-upಅಲಿ ಕಾಣುವ ನಮ್ಮ ಮುಖ ನಿಮ್ಮಾಣೆಗೂ ನಮದಲ್ಲ
ನಾವ್ಯಾರಿರಬಹುದು ಸರಿಯಾಗಿ ನಮಗೂನು ನೆನಪಿಲ್ಲ
ಪ್ರೇಕ್ಷಕರ ಶಿಳ್ಳೆ ಅಭಿಮಾನವೇ ನಮಗಾಸ್ತಿ
ಚೂರೇ ಚೂರು ಇರಲಿ ನಮ್ಮೇಲೆ ನಿಮ್ ಪ್ರೀತಿ
ನಾವ್ ಸೇವಕರು, ನೀವು ಮಾಲೀಕರು
ನೀವಿಲ್ಲದೆ cinema ಉಳಿಯಲ್ಲ
ಕಷ್ಟಪಟ್ಟು ಹುಟ್ಸವ್ನಪ್ಪ ನಮ್ನ ದೇವ್ರು
ಗೊತ್ತಾಗ್ಲಿಲ್ವೇನ್ರಿ ನಾವು cinemaದವ್ರು

Поcмотреть все песни артиста

Sanatçının diğer albümleri

Benzer Sanatçılar