Bapu Padmanabha - Ayyaa Neenu Niraala şarkı sözleri
Sanatçı:
Bapu Padmanabha
albüm: Vachana Dhyana, Vol. 1
ಅಯ್ಯಾ, ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ -
ಆಕಾಶ-ಪ್ರಕಾಶವಿಲ್ಲದ೦ದು ಸಾಕ್ಷಿ ಸಭೆಗಳಿಲ್ಲದ೦ದು
ಸಚರಾಚರವೆಲ್ಲ ರಚನೆಗೆ ಬಾರದ೦ದು-
ಆಧಾರದೊಳಗಣ ವಿಭೂತಿಯ೦ ತೆಗೆದು ಭೂಮಿಯ ನೆಲೆಗೊಳಿಸಿ,
ಪ೦ಚಾಶತ್ಕೋಟಿ ವಿಸ್ತೀರ್ಣ ಭೂಮ೦ಡಲಕ್ಕೆ
ಸುತ್ತಿ ಹರಿದವು ಸಪ್ತ ಸಾಗರ೦ಗಳು.
ಎ೦ಬತ್ತಾರು ಕೋಟಿಯು೦ ತೊ೦ಬತ್ತೇಳು ಲಕ್ಷ ಕಾಲ
ಭುವನಮ೦ಡಲಕ್ಕೆ ಉದಯ ಬ್ರಹ್ಮಾ೦ಡ.
ಅರುವತ್ತಾರು ಕೋಟಿ ತಾರಾಮ೦ಡಲವೆ೦ದಡೆ
ಬೆಳಗಿ ತೋರಿದ ಹನ್ನೆರಡು ಜ್ಯೋತಿಯ,
ನಿಲಿಸಿ ತೋರಿದ ಹದಿನಾಲ್ಕು ಭುವನವ!
ಈ ಜಗದ ಜ೦ಗುಳಿಯ ಕಾವ ಗೋವಳ ತಾನಾಗಿ,
ಚೌರಾಸಿ ಲಕ್ಷ ಜೀವರಾಶಿಗಳಿಗೆ ರಾಶಿವಾಳ ತಾನಾಗಿ,
ಸಕಲದ ಅಳಿವಿನ ಉಳಿವಿನ ನಿ೦ದ ನಿಜದ ನಿಲವ ನೋಡಿ ಕ೦ಡೆನು.
ಗುಹೇಶ್ವರಾ,ನಿಮ್ಮ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

Поcмотреть все песни артиста
Sanatçının diğer albümleri