Bapu Padmanabha - Krutha Yugadalli Bayalu Bayalane Allamaprabhu şarkı sözleri
Sanatçı:
Bapu Padmanabha
albüm: Vachana Antaranga, Vol. 1
ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದೆಡೆ
ಆಗಲಿ, ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ, ಮಹಾಪ್ರಸಾದವೆಂದೆನಯ್ಯಾ
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಜಂಕಿಸಿ ಬುದ್ದಿಯ ಕಲಿಸಿದಡೆ
ಆಗಲಿ, ಮಹಾಪ್ರಸಾದವೆಂದೆನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ, ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ
ನಾನು ಬೆರಗಾದೆನು
ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
ಗುಹೇಶ್ವರಾ
Поcмотреть все песни артиста
Sanatçının diğer albümleri