ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ
ಆ ಹಳ್ಳಿಲ್ ಎಲ್ಲಾ ಜನರು ಲೋಕಾನೇ ಗೊತ್ತಿಲ್ದೋರು
ಅವರೊಳಗೆ ಮುದುಕಿಯೊಬ್ಳು ದೌಲಿಂದ್ಲೇ ಮೆರೀತಿದ್ಲು
ಅವಳಂತು ಬೋ ಘಾಟಿ, ಜಂಬಗಾತಿ
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ
♪
ಆ ಮುದುಕಿ ಚಂದದ ಕೋಳಿ ಸಾಕ್ತಿರಲು
ಆ ಕೋಳಿ ಕೊಕ್ಕೋ ಎಂದು ಕೂಗ್ತಿರಲು
ಅದರಿಂದಲೇ ಊರಿಯೋ ಸೂರ್ಯ ಮೂಡ್ತೈತೆಂದು
ನನಿಂದ್ಲೆ ಊರು ಬೆಳಕು ಕಾಣ್ತೈತೆಂದು
ತನ್ನಿಂದ್ಲೆ ಹಳ್ಳಿ ಎಲ್ಲಾ ತಾನಿಲ್ದೆ ಬದುಕೇ ಇಲ್ಲ
ಅಂದ್ಕೊಂಡೆ ಸೊಕ್ಕಿನಿಂದ ಕೊಬ್ಬಿದ್ದಳು
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ
♪
ಊರ್ನೋರ್ಗೆ ತನ್ನ ದರ್ಪ ತೋರಿಸ್ಬೇಕೆಂದು
ಕಂಕ್ಳಾಗೆ ತನ್ನ ಕೋಳಿ ಬಚ್ಚಿಟ್ಕೊಂಡು
ಕತ್ಲಾಗೆ ಒಂದೊಂದೇನೆ ಹೆಜ್ಜೆ ಇಟ್ಕೊಂಡು
ಕಾಡ್ನಾಗೆ ಸೇರ್ಕೊಂಡ್ಲು ಹೊತ್ ನೋಡ್ಕೊಂಡು
♪
ಬೆಳ್ಗಾಯ್ತು ಯಾವತ್ನಂಗೆ ಪೆಚ್ಚಾದ್ಲು ಮುದುಕಿ ಹಂಗೆ
ನಡೆದೈತೆ ಈ ಲೋಕ ಮಾಮೂಲ್ನಂಗೆ
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ
♪
ತನ್ನ ಕೋಳಿ ಕೂಗಿದ್ರೇನೇ ಬೆಳಗಾಗ್ತಯಿತೆಂದು
ನಂಬ್ಕೊಂಡ ಮುದುಕಿ ಗರ್ವ ಇಳಿದ್ಹೋಯ್ತಿಂದು
ಸೊಕ್ಕಿಲ್ದೆ ಸೂರ್ಯಚಂದ್ರ ಬೆಳಕ ಕೊಡ್ತಾರೆ
ಈ ಭೂಮಿ ಮಂದಿ ಮಾತ್ರ ಭಿಂಕಪಡ್ತಾರೆ
ತಿಳ್ಕೊಂಡು ಒಳ್ಳೇ ನೀತಿ, ಇಟ್ಕೊಂಡು ಬಾಳಿನ್ ರೀತಿ
ಎಲ್ಲಾರೂ ಮೆಚ್ಚೋ ಹಾಗೆ ನಡ್ಕೋಬೇಕು
ಮಲ್ನಾಡಿನ್ ಮೂಲೆನಾಗೆ ಇತ್ತೊಂದು ಸೋಮ್ನಹಳ್ಳಿ
ಆ ಹಳ್ಳಿಲ್ ಎಲ್ಲಾ ಜನರು ಲೋಕಾನೇ ಗೊತ್ತಿಲ್ದೋರು
ಅವರೊಳಗೆ ಮುದುಕಿಯೊಬ್ಳು ದೌಲಿಂದ್ಲೇ ಮೆರೀತಿದ್ಲು
ಅವಳಂತು ಬೋ ಘಾಟಿ, ಜಂಬಗಾತಿ
Поcмотреть все песни артиста
Sanatçının diğer albümleri