ಮೌನ ತಾಳಿತೆ ದಾರಿ ನನ್ನ ಹೆಜ್ಜೆ ಸಪ್ಪಳ ಕೇಳಿ ಮೋಡ ಹೋಯಿತೆ ಹಾರಿ ಸಣ್ಣ ಗಾಳಿ ಮಾತನು ಕೇಳಿ ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ ಮೌನ ತಾಳಿತೆ ದಾರಿ ನನ್ನ ಹೆಜ್ಜೆ ಸಪ್ಪಳ ಕೇಳಿ ಮೋಡ ಹೋಯಿತೆ ಹಾರಿ ಸಣ್ಣ ಗಾಳಿ ಮಾತನು ಕೇಳಿ ಕಲೆತು ಆಡಿದ ಸಾವಿರ ಸವಿಮಾತಿನ ಬಿಸಿ ಆರಿತೇ ಸಲಿಗೆ ತೋರಿದ ಸ್ನೇಹವು ಹುಡುಗಾಟದ ಹಠವಾಯಿತೇ ಕುಶಲ ಕೇಳುತಿವೆ (ಕುಶಲ ಕೇಳುತಿವೆ) ನಡೆದ ದಾರಿಗಳು (ನಡೆದ ದಾರಿಗಳು) ಅಳಿಸಲಾಗುವುದೇ, ಹಸಿಯ ಗೋಡೆಯ ಗೀಚಿದ ಸಾಲು ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ ಕರಗಲಾರದೆ ಹೋದೆನೇ ಪದವಿಲ್ಲದ ಪರಿಭಾಷೆಗೆ ಅರಳಬಲ್ಲೆನೇ ಈಗಲೂ ಎದೆಯಾಳದ ಅಭಿಲಾಷೆಗೆ ಹಿಡಿದು ನಿಲ್ಲಿಸಿವೆ (ಹಿಡಿದು ನಿಲ್ಲಿಸಿವೆ) ಕಡೆಯ ಮಾತುಗಳು (ಕಡೆಯ ಮಾತುಗಳು) ತಡೆಯಲಾಗುವುದೇ, ಎದೆಯ ಬಾಗಿಲ ತಟ್ಟಿದ ಮೇಲೂ ಬದಲಾಯಿತೇನು ಕಣ್ಣ ಹೊಳಪು ಸಿಗದಾಯಿತೇನು ನನ್ನ ಗುರುತು ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ