Kishore Kumar Hits

All Ok - Gutuku Namma Baalu şarkı sözleri

Sanatçı: All Ok

albüm: Ide Antaranga Shuddhi​


ಗುಟುಕು ನಮ್ಮ ಬಾಳು
ಘಳಿಗೆಗೊಂದು ಗೋಳು
ತಿರುಗೋ ಭೂಮಿಲಿ ತಿರುವು ನೂರಿದೆ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸೂ ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸೂ ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಗುಟುಕು ನಮ್ಮ ಬಾಳು
(ಪಾಪ ಮಾಡಿ ಯಾತ್ರೆ ಮಾಡು
ಪುಣ್ಯ ಬರಲಿ ಅಂತ
ಶಿವನು ಕೂಡ ಹಿಂಗೇ ಹೆದರಿ ಸುಡುಗಾಡ್ನಲ್ಲಿ ಕುಂತ
ಬಂದು ಹೋಗೋ ಮೂರು ದಿನ್ದಲ್ ಮೂರು ಬಿಟ್ರೆ ಹೆಂಗೆ
ಬಂಧು ಕೂಡ ಬೈತಾರ್ ಬಂದು ಸುಮ್ನೆ ಕೂತ್ರೆ ಹಿಂಗೇ
ಆರು ಮೂರು site-u ನಿಂದು ವಾಸ್ತು ನೋಡೋರ್ಯಾರು
ಯಾರೇ ಸಾಯಲಿ ಮೂರು ದಿನ ಹೆಚ್ಚು ಅತ್ತೋರ್ಯಾರು
ಬದುಕೇ ಆಟ ಸೋಲು ಗೆಲುವು ಎಲ್ಲರಿಗು ಸಹಜ
ಆಟದಲ್ಲಿ ಆಯ್ಕೆಯಾದೆ ಪುಣ್ಯ ನಿಂದು ಮನುಜ
(ಮನುಜ)
ಕಾಲಕ್ಕೆ ತೋರಿ ಕೈಯ ನಿಲ್ಸೋ ತಾಕತ್ತು ಯಾರಿಗೆ
ಕೇಳ್ತೀನಿ ಸಿಗಲಿ ದೇವ್ರು ಬಂದ್ರೆ ನಮ್ಮೂರಿಗೆ
ಆಸೆಗೆ ಇಲ್ಲಾ ಬೇಲಿ ನ್ಯಾಯಕ್ಕೆ ಇಲ್ಲಾ ಕೂಲಿ
ಪಾಪದ public ಜಾಸ್ತಿ ಬೈಯ್ಯೋಣ ಯಾರಿಗೆ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸೂ ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸೂ ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಗುಟುಕು ನಮ್ಮ ಬಾಳು

ನಿನಿನಿಸ ಸರಿರಿಸ
ಸನಿನಿಸ ಸರಿರಿಸ
ಸರಿ ರಿಮಾ ಮಪ ಪನಿ ನಿದ ದಪ ಪಮದನಿ
ಸಾನಿ ಸಾನಿ ಸಾನಿ ಸಾನಿ

ಹೆಂಡ್ತಿ ಮಕ್ಕ್ಳು ಹಾಯಾಗಿರ್ಲಿ ದುಡಿದು ದುಡಿದು ಸಾಯ್ಲಿ
ದುಡ್ಡಿಗಿಂತ ದೊಡ್ಡೋರ್ಯಾರು ದುಡ್ಡೇ ತಂದೆ ತಾಯಿ
ನೀನು ಸತ್ರೂ ಸ್ವರ್ಗ ಸೇರೋ ಆಸೆ ಸಾಯಾಕಿಲ್ಲ
ಭೂಮಿಯಲ್ಲೇ ಸ್ವರ್ಗ ಉಂಟು ನೀನು ಹುಡ್ಕಲೇ ಇಲ್ಲ
ಜೀವನ ಒಂದು ಮಂಗನ ಆಟ ಮೇಲೆ ಕೆಳ್ಗೆ ಜಿಗಿತಾ
ಹೆಣ್ಣು ಗಂಡು ಸೇರಿಕೊಂಡರೆ ಅದುವೇ ಕರಡಿ ಕುಣಿತ
ದೇವ್ರು ಕೊಟ್ಟ ಬಾಡ್ಗೆ ಜೀವನ ಬೇಕಾಬಿಟ್ಟಿ ಎಲ್ಲ
ತಗ್ಗಿ ಬಗ್ಗಿ ಬಾಳೋ ಮಗನೆ ಬಾಡ್ಗೆ ಕಟ್ಟೇ ಇಲ್ಲ
ಕಾಸಿದ್ರೆ ನೀನೆ hero
ಇರದಿದ್ರೆ sideಯಿಗೆ ಬಾರೋ (correct)
ಬದುಕೊಂದು ಬಣ್ಣದ ಆಟ ಪರದೆ ಬೀಳೋ ತನಕ
ಸತ್ಯಕ್ಕೆ no guarantee
ಸುಳ್ಳೀಗೆ full warranty
ಜೀವನಾನೆ ಕಳ್ಳರ ಸಂತೆ ತಂದು ಕೀಳೋತನಕ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸೂ ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಪಾಪದ ಬಡ್ಡಿ ಪುಣ್ಯದ ಅಸಲು ಹಣೆಯ ಪುಸ್ತಕದಲ್ಲಿ
ಬುಡುಗಾಸೂ ಬಿಡದೆ ಲೆಕ್ಕವ ಇಡುತ ಕುಳಿತಾನೊಬ್ಬ ಮ್ಯಾಲಿ
ಗುಟುಕು ನಮ್ಮ ಬಾಳು
ಘಳಿಗೆಗೊಂದು ಗೋಳು (ಶಭಾಷ್)
ತಿರುಗೋ ಭೂಮಿಲಿ ತಿರುವು ನೂರಿದೆ (ಹೌದಂತೆ)
ಗುಟುಕು ನಮ್ಮ ಬಾಳು

Поcмотреть все песни артиста

Sanatçının diğer albümleri

Benzer Sanatçılar