Kishore Kumar Hits

All Ok - Love You Amma şarkı sözleri

Sanatçı: All Ok

albüm: Love You Amma


ಊರು ಹೋತ್ತಾಡ್ಸಿ, ನನ್ನ ಎತ್ತಾಡ್ಸಿ
ದುಡಿದ ಸಂಬಳವೇ ಕೇಳದ ನಿಸ್ವಾರ್ಥಿ
ನನ್ನಮ್ಮ
ನನ್ನಮ್ಮ

ದಿನ ಬೇಯ್ಸಾಕಿ ಕೊಡುವೆ ಕೈಚಾಚಿ
ಎಂಥಾ ಕಷ್ಟವೇ ಬಂದ್ರೂ ನುಂಕೊಂಡು ನಗ್ತಾ ಇರ್ತಿ
ಹೆಂಗಮ್ಮ
ನನ್ನಮ್ಮ
ಅಮ್ಮ ದಿನ ಹಿಂಗೆ ಊಟ ಕೊಡ್ತಿಯಾ
ನನ್ನ ಹೊಟ್ಟೆ ಹಸಿದರೆ
ಅಮ್ಮ ಜೋ ಜೋ ಲಾಲಿ ಹಾಡ್ತಿಯಾ
ಕೆಟ್ಟ ಕನಸು ಬಿದ್ದರೆ
ಅಮ್ಮ life long ಜೊತೆಗೆ ಇರ್ತಿಯಾ
ಎಲ್ಲಾ ಬಿಟ್ಟು ಹೋದರೆ
ಬೇರೆ ಪರಪಂಚಾನೇ ಗೋತಿಲ್ಲ ನಂಗೆ ನಿನ್ನ ಬಿಟ್ಟರೆ
ಪ್ರತಿ ಧರ್ಮಕು ನೂರು ದೇವರ ಈ ತಕಡಿ ಮೇಲೆ ಇಟ್ಟರೆ
ಆ ಎಲ್ಲಾ ದೇವರ ತೂಕಕು ಜಾಸ್ತಿ ನೀನು ಕೊಡುವ ಅಕ್ಕರೆ
ನೀ ಚನ್ನಾಗಿರ್ಬೇಕು ಅಷ್ಟೆ ಬೇರೆ ಏನು ನಂಗೆ ಬೇಕಾಗಿಲ್ಲ
ಮತ್ತೆ ನಿಂಗೆ ಹುಟ್ಟೋ ಆಸೆ ಕಣೆ, ಅಮ್ಮ
ಊರು ಹೋತ್ತಾಡ್ಸಿ, ನನ್ನ ಎತ್ತಾಡ್ಸಿ
ದುಡಿದ ಸಂಬಳವೇ ಕೇಳದ ನಿಸ್ವಾರ್ಥಿ
ನನ್ನಮ್ಮ
ನನ್ನಮ್ಮ

ದಿನ ಬೇಯ್ಸಾಕಿ ಕೊಡುವೆ ಕೈಚಾಚಿ
ಎಂಥಾ ಕಷ್ಟವೇ ಬಂದ್ರೂ ನುಂಕೊಂಡು ನಗ್ತಾ ಇರ್ತಿ
ಹೆಂಗಮ್ಮ
ನನ್ನಮ್ಮ

Love you ಈ ಜೀವಕ್ಕಿಂತ
Love you ನನ್ನ ಜೀವ್ನಕಿಂತ
Love you ಅಮ್ಮ love you, love you
ಅಮ್ಮ love you
Love you ಈ ಜೀವಕಾಗಿ
Love you ಪ್ರತಿ ಉಸಿರಿಗಾಗಿ
Love you, love you, love you, love you
ನೀ ಸ್ನೇಹಕೂ ಮೀರಿದ ಸಡಗರವೇ
ಪ್ರತಿ ಜೀವಕೂ ಸಿಕ್ಕಿರೋ ಉಡುಗೊರೆಯೇ
ನೀ ಬೈದರು ಕೂಡ ಒಳಿತೇ
ದೇವರು ಕೂಡ ಪೂಜಿಸೋ ದೇವತೆ
ನೀ ಚನ್ನಾಗಿರ್ಬೇಕು ಅಷ್ಟೆ
ಬೇರೆ ಏನು ನಂಗ್ ಬೇಕಾಗಿಲ್ಲ
ಮತ್ತೆ ನಿಂಗೆ ಹುಟ್ಟೋ ಆಸೆ ಕಣೆ ಅಮ್ಮ
(ಊರು ಹೋತ್ತಾಡ್ಸಿ, ನನ್ನ ಎತ್ತಾಡ್ಸಿ
ದುಡಿದ ಸಂಬಳವೇ ಕೇಳದ ನಿಸ್ವಾರ್ಥಿ
ನನ್ನಮ್ಮ)
ಅಮ್ಮ, ಅಮ್ಮ
(ನನ್ನಮ್ಮ)
(ದಿನ ಬೇಯ್ಸಾಕಿ ಕೊಡುವೆ ಕೈಚಾಚಿ
ಎಂಥಾ ಕಷ್ಟವೇ ಬಂದ್ರೂ ನುಂಕೊಂಡು ನಗ್ತಾ ಇರ್ತಿ
ಹೆಂಗಮ್ಮ
ನನ್ನಮ್ಮ)
ಅಮ್ಮ ಅಮ್ಮ I love you
ಅಮ್ಮ
ಅಮ್ಮ, I love you
ನಮ್ಮ ಅಮ್ಮ I love you (love you, love you, love you)

Поcмотреть все песни артиста

Sanatçının diğer albümleri

Benzer Sanatçılar