Hamsa Lekha - Putta Putta şarkı sözleri
Sanatçı:
Hamsa Lekha
albüm: Nannu Nanna Kanasu (Original Motion Picture Soundtrack)
ಒಂದು ಮಾಮರಾ
ಮಾಮರದಗೊಂದು ಗುಬ್ಬೀ ಗೂಡು
ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು
ಬಾನಿನಂತೊಂದ್ ಗುಬ್ಬಿ, ಭೂಮಿಯಂತೊಂದ್ ಗುಬ್ಬಿ
ಕೂಡಿ ಆಯಿತಮ್ಮ ಹೂವಿನಂತೊಂದ್ ಗುಬ್ಬಿ
ಆಹಾ ಕೇಳಿರಿ ಮೂರು ಗುಬ್ಬಿಯ ಲಾಹಿರಿ
ಆಹಾ ಕೇಳಿರಿ ಮೂರು ಗುಬ್ಬಿಯ ಲಾಹಿರಿ
ಸಿಸಿಸಿಸಿ ಸಗಗಿರಿ ರಿಸ ಸಿನಿ ನಿರಿ ರಿಸ ಸಿನಿ ನಿದಿ ದಿಸ ನಿಸಿ ದಿನಿಪಿ
ಅದು ಸರಿಗಮಪದನಿಸ ರೀ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ ಚಿವ್ವ
(ಚಿವ್ ಚಿವ್ವ
ಚಿವ್ ಚಿವ್ವ)
ಇವ್ರಿದ್ದಾರಲ್ರೀ ಬಾನಿನತೊಂದು ಗುಬ್ಬಿ
ಇವರ ಪ್ರೀತಿ ಎಂತಾದ್ದು ಹೇಳ್ಲಿ
ಬಾನಿಗೆ ಒಂದು ರೂಪಿಲ್ಲ
ಮುಟ್ಟಿ ನೋಡಕ ಆಗೋಲ್ಲ
ಅದಕ್ಕೂ ಒಂದು ಮನಸೈತಿ
ಪಾಪ ಅದಕ ತಿಳಿದಿಲ್ಲ
ಅದರ ಪ್ರೀತಿ ಹೆಂಗಂದ್ರ
ಧಡ್ ಧಡ ಅಂತ ಗುಡುಗೋದು
ಧಡ್ ಧಡ ಅಂತ ಗುಡುಗೋದು
ಫಳ್ ಫಳ ಅಂತ ಮಿಂಚೋದು
ಒಲ್ಲೆನೆಂದ್ರೂ ಸುರಿಯೋದು
ಆಕಾಶದಗಲ ಈ ತಂದಿಯ ಹೃದಯ
ಅತಿವೃಷ್ಠಿ ಮಾಡಿ ಕಾಪಾಡುತೈತೆ ಮನೆಯ
ಆಹಾ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ
ಆಹಾ ಕೇಳಿರಿ ಬಾನಿನ ಪ್ರೀತಿಯ ಲಾಹಿರಿ
ಇವ್ರು ಅನುಭಿನು ಮಾನುನಾನು
ಅನುಭಿನು ಮಾನುನಾನು
ಕೆನುಯಾನು ಜಾನು ಮಾನುನಾ
ಇವರು ಮಾನಕೆ, ಇವರು ಮಾನಕೆ
ಅಭಿಮಾನಕೆ ಯಜಮಾನಾ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ ಚಿವ್ವ
ಈಕಿ ಇದ್ದಾಳಲ್ರೀ ಭೂಮಿಯಂಥ ಗುಬ್ಬಿ
ಈಕಿ ಮಾತು ಎಂತಾದ್ದು ಹೇಳ್ಲಿ
ತಿರುಗೋ ಭೂಮಿ ಜಗದಮ್ಮ
ಕರಗೋ ಭೂಮಿ ನಮ್ಮಮ್ಮ
ಆಕೀನೋ ಜ್ವಾಲಾಮುಖಿ
ಈಕೀನೋ ಅಂತರ್ಮುಖಿ
ಆಕಿಯ ಕ್ವಾಪ ಭೂಕಂಪ
ಈಕೀಯದೊ ಬರಿ ಅನುಕಂಪ
ಆಕಿ ಕ್ಷಮಯಾ ಧರಿತ್ರಿ,
ಈಕಿ ಸಹನೆಯ ಗಾಯತ್ರಿ
ಆ ಭೂಮಿದೇನೋ ಬದಲಾಗೋ ಋತು
ಈ ತಾಯಿದೇನೋ ಬದಲಾಗದ ಮಾತು
ಆಹಾ ಕೇಳಿರಿ ಭೂಮಿಯ ಮಾತಿನ ಲಾಹಿರಿ
ಆಹಾ ಕೇಳಿರಿ ಭೂಮಿಯ ಮಾತಿನ ಲಾಹಿರಿ
ಈಕಿ ಮಾನುತಾನು ಡೊನು ಬೂನು
ಮಾನುತಾನು ಡೊನು ಬೂನು
ಮಾನುತಾನು ಡೊನು ಬೂನುನಿ
ಈಕಿ
ಈಕಿ
ಈಕಿ ಮಾತಾಡೋ ಭೂಮಿ
ಒಂದು ಮಾಮರಾ
ಮಾಮರದಗೊಂದು ಗುಬ್ಬಿ ಗೂಡು
ಗುಬ್ಬಿ ಗೂಡಾಗ ಮೂರೊತ್ತು ಕೇಳುತಿತ್ತು ಹಾಡು
ಮೂಖ ಮನಸ್ಸು ಅಂತಾರಾ
ಮನಸಮಾತ ಬಲ್ಲೋರು
ಮೂಖ ಮನಸ್ಸು ಅಂತಾರಾ ಮನಸಮಾತಾ ಬಲ್ಲೋರು
ಆ ಮೂಖ ಭಾಷೆಯಲ್ಲೇ
ಈ ಹೂ ನನ್ನ ಕರೆಯಿತು
ಹಸಿವೆ ಜೀವ ಅಂತಾರಾ
ಹಸಿವ ನೋವ ಬಲ್ಲೋರು
ಹಸಿವೆ ಜೀವ ಅಂತಾರಾ ಹಸಿವ ನೋವ ಬಲ್ಲೋರು
ಆ ಜೀವದಿಂದ ನೋವ ಈ ಹೂ ನೀಡಿ ನೀಗಿತು
ನೂರು ಜನ್ಮ
ನೂರು ಜನ್ಮ
ಹಾಡಬೇಕು ಈ ಹೂವು ಋಣ ತೀರಲು
ಮುಂದೊಂದು ಜನ್ಮ ನಂಗಂತೂ ಬೇಕಾ
ಈ ಹೂವೇ ನನಗಾ ತಾಯಾಗಬೇಕಾ
ಆಹಾ ಕೇಳಿರಿ ಹೂವಿನ ಮನಸ್ಸಿನ ಲಾಹಿರಿ
ಆಹಾ ಕೇಳಿರಿ ಹೂವಿನ ಮನಸ್ಸಿನ ಲಾಹಿರಿ
ಈನುಹುನು ಐನು ದೈನು ಈನುಐನು ದೈನು
ದೈನು ಹನು ದೈನು ಹನುರಿ
ಈ ಹೂವೇ
ಈ ಹೂವೇ
ಈ ಹೂವೇ ದೈವ ರೀ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ವ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ ಚಿವ್ವ
ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ವ
(ಚಿವ್ ಚಿವ್ವ ಚಿವ್ ಚಿವ್ವ ಚಿವ್ ಚಿವ್ವ
ಗುಬ್ಬಿ ಗೂಡಲಿ ಚಿವ್ ಚಿವ್ ಚಿವ್ವ)
Поcмотреть все песни артиста
Sanatçının diğer albümleri