ಎಲೆ ಹೊಂಬಿಸಿಲೇ, ಎಲೆ ತಂಬೆಲೆರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ?
ಎಲೆ ನೀರಿನಲೆ, ಎಲೆ ಹಸಿರ್ಹಸಿರೇ
ಇಂಥಾ ಜೋಡಿನಾ ಎಂದಾರಾ ಕಂಡಿರಾ?
ಓ, ಕೂಹೂ ಇಂಚರವೆ, ಸುಖಿ ಸಂಕುಲವೇ
ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ?
ಎಲೆ ಹೊಂಬಿಸಿಲೇ, ಎಲೆ ತಂಬೆಲೆರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ?
ನನ್ನವಳು ಚಂದನ, ಹೆಂಗರುಳ ಹೂ ಮನ
ಋತುವೆ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ ತುಂಬಿರುವ ಸಾಗರ
ನನ್ನ ದೊರೆಯ ಹೃದಯ ನಿವಾಸಿ ನಾ
ಅರೆರೆ ನುಡಿದೆ ಕವನ
ನುಡಿಸೋ ಕವಿಗೆ ನಮನ
ಓ, ಮಹಾ ಮೇಘಗಳೇ, ಅಸ್ತು ದೈವಗಳೇ
ಇಂಥಾ ಆಂತರ್ಯದ ಸೌಂದಯ೯ದ ಸೊಬಗು ಕಂಡಿರಾ?
ಎಲೆ ಹೊಂಬಿಸಿಲೇ, ಎಲೆ ತಂಬೆಲೆರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ?
ತಂದನಾನ ತಾನನನ
ತಂದನಾನ ತಾನನನ
ಹುಣ್ಣಿಮೆಯ ಆಗಸ ಬೆಳಕಿನ ಪಾಯಸ
ಸುರಿಸೇ ಸವಿದೆ ಸತಿಯೇ ನೀ ಸವಿ
ನಿಮ್ಮ ತುಟಿ ತೋರಿಸಿ, ನನ್ನ ತುಟಿ ಸೇರಿಸಿ
ನೀವು ಸವಿದ ಸವಿಗು ಇದು ಸವಿ
ಅರೆರೆ, ನುಡಿದೆ ಪ್ರಾಸಾ
ಕವಿಯ ಜೊತೆಗೆ ವಾಸ
ಓ, ಚುಕ್ಕಿ ತಾರೆಗಳೆ ಸುಖೀ ಮೇಳಗಳೇ
ಇಂಥಾ ಸಂಸಾರದ ಸವಿಯುಟದ ಸವಿಯ ಕಂಡಿರಾ?
ಎಲೆ ಹೊಂಬಿಸಿಲೇ, ಎಲೆ ತಂಬೆಲೆರೆ
ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ?
ಎಲೆ ನೀರಿನಲೆ, ಎಲೆ ಹಸಿರ್ಹಸಿರೇ
ಇಂಥಾ ಜೋಡಿನಾ ಎಂದಾರ ಕಂಡಿರಾ?
ಓ, ಕೂಹೂ ಇಂಚರವೇ, ಸುಖಿ ಸಂಕುಲವೇ
ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ?
ಎಲೆ ಹೊಂಬಿಸಿಲೇ, ಎಲೆ
ತಂಬೆಲೆರೆ
ಇಂಥಾ ಜೋಡಿನಾ ಎಲ್ಲರಾ ಕಂಡಿರಾ?
ಎಲೆ
Поcмотреть все песни артиста
Sanatçının diğer albümleri