ಹೇ ಜೀವಗಳ ವನವೇ ಭಾವಗಳ ವನವೇ ನೀವಿರದೆ ನಾನಿಲ್ಲ ನಾನಿರದೇ ನೀವಿಲ್ಲ ಪ್ರೀತಿ ನನ್ನ ಹೆಸರು (ನೆನಪಿರಲಿ ನೆನಪಿರಲಿ ನೆನಪಿರಲಿ ನೆನಪಿರಲಿ) ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿ ಅಲ್ಲ ಹೂವು ದುಂಬಿ ಹಾಡು ಅದು (ನೆನಪಿರಲಿ ನೆನಪಿರಲಿ ನೆನಪಿರಲಿ ನೆನಪಿರಲಿ) ಪ್ರೀತಿ ಪಾಠವಲ್ಲ, ಪ್ರಣಯದೂಟವಲ್ಲ ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರೀ ಮುತ್ತು ಅಲ್ಲ ಕಾಣಿಸದ ಕಾವ್ಯ ಅದು (ನೆನಪಿರಲಿ ನೆನಪಿರಲಿ ನೆನಪಿರಲಿ ನೆನಪಿರಲಿ) ಪ್ರಾಯದ ಮೇಲೆ ದಿಬ್ಬಣ ಹೊರಟು ಜೀವನವ ಸುತ್ತಿ ಕಹಿಯನ್ನೆಲ್ಲಾ ಸವಿಯುವುದನ್ನು ಕಲಿಸುವುದೇ ಪ್ರೀತಿ ಮೋರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ ಎಲ್ಲ ಸುಂದರವೆಂದು ನೋಡೋ ಒಳಗಣ್ಣೇ ಪ್ರೀತಿ ನಿದಿರೆಯಾದರು ಅಲ್ಲಿಲ್ಲಿಲ್ಲ ಪ್ರೀತಿ ಇಲ್ಲದ ಅಣುಕಣವಿಲ್ಲ ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ ಬರೀ ಮುತ್ತು ಅಲ್ಲ ಕಾಣಿಸದ ಕಾವ್ಯ ಅದು (ನೆನಪಿರಲಿ) Love is soul but not one (ನೆನಪಿರಲಿ) Love is one but not alone (ನೆನಪಿರಲಿ) Love is god but not a stone (ನೆನಪಿರಲಿ) ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ ರೆಪ್ಪೆಯೆ ತೆರೆದ ಕಣ್ಣುಗಳೆಂದೂ ಮಾಡವು ಉಪವಾಸ ಬಯಸುವುದನ್ನೇ ತಪ್ಪು ಎಂದರೆ ಮನಸಿಗೆ ಅವಮಾನ ಕ್ಷಣಿಕ ಸುಖಕ್ಕೆ ಸೋಲದಿದ್ದರೆ ಮೋಹಕೂ ಅಪಮಾನ ಸ್ನೇಹಕ್ಕೆ ಎಂದೂ ಪ್ರೀತಿಯೇ ಗೆಳೆಯ ಪ್ರೀತಿಗೆ ಎಂದೂ ಸತ್ಯವೇ ಹೃದಯ ಒಲವು ಒಂಟಿಯಲ್ಲ ಒಂಟಿ ಸೂರ್ಯನಲ್ಲ ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ ಒಂಟಿ ಪ್ರೇಮಿ ಅಲ್ಲ ಹೂವು ದುಂಬಿ ಹಾಡು ಅದು (ನೆನಪಿರಲಿ) I am love, love is life (ನೆನಪಿರಲಿ) I am love, love is feel (ನೆನಪಿರಲಿ) I am love, love is beauty (ನೆನಪಿರಲಿ) ನಾನು ಮೋಹವಲ್ಲ ವ್ಯಾಮೋಹವಲ್ಲ ಸುಖದ ಬಯಲಲಿ ಅಲೆಯುವ ಅಶ್ವವಲ್ಲ ಮಾಯಾ ಜಿಂಕೆ ಅಲ್ಲ ಆಸೆಯೆಂದೂ ಪ್ರೀತಿ ಅಲ್ಲ (ನೆನಪಿರಲಿ) Love is soul but not one (ನೆನಪಿರಲಿ) Love is one but not alone (ನೆನಪಿರಲಿ) Love is god but not a stone (ನೆನಪಿರಲಿ)