Kishore Kumar Hits

Hamsa Lekha - Kurakku Kalli Kere (From "Nenapirali") şarkı sözleri

Sanatçı: Hamsa Lekha

albüm: Naadha Brahma Hamsalekha Hits


ಅರೆ ಯಾರ್ರೀ ಹೆದರ್ಕೋಳ್ಳೋರು ಬೆದರಿಕೊಳ್ಳೋರು
ಪೇಚಾಡೋರು ಪರದಾಡೋರು
ಮರ್ ಗಳ್ ಮಾರಿನಲ್ಲಿ ಮಾತಾಡೋರು
ಮಾರ್ನಿಂಗ್ ಷೋನಲ್ಲಿ ಪಿಸುಗೊತ್ತೋರು
ಮೈಸೂರನಂತ ಜಿಲ್ಲೆಲಿದ್ದು
ಕಣ್ಣಿಗ್ ಬೇಕಾದ್ ನೋಟ ಇದ್ದು
ಹಳೆ ರಾಜ್ರು ಅಪ್ಪಣೆ ಇದ್ದು
ಪ್ರೀತಿ ಮಾಡೋ ಜಾಗಗಳಿದ್ದು
ಕದ್ದು ಮುಚ್ಚಿ ಓಡಾಡ್ತಿರಲ್ಲರೀ
ಬನ್ರೀ ನೋಡ್ರಿ ನಾನ್ ಲವ್ ಮಾಡೋ ಸ್ಟೈಲ್ ಸ್ವಲ್ಪ ಕಲಿರೀ

ಕೂರಕ್ ಕುಕ್ರಳ್ಳಿಕೆರೆ ವ್ಹಾ ವ್ಹಾ
ತೇಲಕ್ಕ್ ಕಾರಂಜಿಕೆರೆ ವ್ಹಾ ವ್ಹಾ
ಹೇ ಕೂರಕ್ ಕುಕಳ್ಳಿಕೆರೆ
ತೇಲಕ್ಕ್ ಕಾರಂಜಿಕೆರೆ
ಲವ್ವಿಗೆ ಈ ಲವ್ವಿಗೆ
ಚಾಮುಂಡಿ ಬೆಟ್ಟ ಇದೆ
ಕಣಂಬಾಡಿ ಕಟ್ಟೆ ಇದೆ
ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ಧಿಗಿಲ್ ದಬಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಬಲ್ಮುರೀಲಿ ಪೂಜೆ ನೆಪ ವ್ಹಾ ವ್ಹಾ
ಎಡಮುರಿಲಿ ಜಪ ತಪ ವ್ಹಾ ವ್ಹಾ
ಬಲ್ಮುರೀಲಿ ಪೂಜೆ ನೆಪ ಎಡಮುರಿಲಿ ಜಪ ತಪ
ಈ ಲವ್ವಿಗೆ ನಿರ್ವಿಗ್ನ ಲವ್ವಿಗೆ
ನೊರ್ತಿನಲ್ಲಿ ಶ್ರೀರಂಗಪಟ್ನ
ಸೌತಿನಲ್ಲಿ ನಂಜನಗೂಡು
ಪೂಜೆಗೆ ಲವ್ ಪೂಜೆಗೆ
ಈ ಭಯ ಬಿಸಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ಧಿಗಿಲ್ ದಬಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರೀ
ಗಲಾಟೆನೇ ಇಲ್ಲ ಬನ್ರೀ ಗಂಗೋತ್ರಿಯಲ್ಲಿ
ಮನಸು ಬಿಚ್ಕೊಳ್ರಿ
ಮರ ಮರ ಮರದ ಮರೆಲಿ
ಅರಮನೆಲಿ ಅಡ್ಡಾಡುತಾ
ಅರಮನೆಲಿ ಅಡ್ಡಾಡುತಾ ಮೂಡು ತಗೋಳ್ರಿ
ರಾಜ್ರ ಥರ ನೇ ಲವ್ನಲ್ ಧರ್ಬಾರ್ ಮಾಡ್ಬಿದ್ರಿ
ರಂಗನತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕುತೊರೆಲ್ ಮನಸು ಕೊಡ್ರಿ
ಕಣ್ಣಲ್ ಕಣ್ಣಿಟ್ಟು
ಕಾಳಿದಾಸನೇ ಇಲ್ಲಿ ರಸ್ತೆ ಆಗವ್ನೆ
ಪ್ರೀತಿ ಮಾಡೋರ್ಗೆ ಸರಿ ದಾರಿ ತೋರ್ತಾನೆ
ಕೆ ಆರ್ ಸ್ ನಲ್ಲಿ ಕೆಫೆ ಮಾಡಿ
ಬ್ಲಫ್ ನಲ್ಲಿ ಪುಫ್ಫ್ ಮಾಡಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್
ಇಲ್ಲದಿದ್ರೆ ಒಂಟಿಕೊಪ್ಪಲ್
ಲವ್ವಿಗೆ ಈ ಲವ್ವಿಗೆ
ಈ ಭಯ ಬಿಸಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ಧಿಗಿಲ್ ದಬಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

ಜಾತಿ ಕೆಟ್ಟರು ಸುಖ ಪಡ್ಬೇಕ್
ಜಾತಿ ಕೆಟ್ಟರು ಸುಖ ಪಡ್ಬೇಕ್
ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗೇ ಹೋಗ್ಲಮ್ಮ
ಕದ್ದು ಮುಚ್ಚಿ ಪ್ರೀತಿ ಮಾಡೋ
ಕದ್ದು ಮುಚ್ಚಿ ಪ್ರೀತಿ ಮಾಡೋ
ಕಳ್ಳ ಲವ್ವಮ್ಮ
ಸತ್ಯ ಹೇಳಮ್ಮ ನಿಜವಾದ್ ಪ್ರೀತಿ ಮಾಡಮ್ಮ
ಜಾತಿ ಸುಡೋ ಮಂತ್ರ ಕಿಡಿ ಪ್ರೀತಿ ಕಣಮ್ಮ
ಮನುಜ ಮತ ವಿಶ್ವ ಪತ ಅಂತ ಹೇಳಮ್ಮ
ತೀರ್ಥ ಹಳ್ಳಿಲಿ ಕುವೆಂಪು ಹುಟ್ಟಿದ್ರು
ವಿಶ್ವ ಪ್ರೇಮನ ಮೈಸೂರಿಗೆ ತಂದ್ಕೋಟ್ರು
ಮೈಸೂರು ಕೂಲಾಗಿದೆ ಬೃಂದಾವನ ಗ್ರೀನಾಗಿದೆ
ಲವ್ವಿಗೆ ಸ್ವೀಟ್ ಲವ್ವಿಗೆ
ನರಸಿಂಹಸ್ವಾಮಿ ಪದ್ಯ ಇದೆ
ಅನಂತ್ಸ್ವಾಮಿ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ
ಈ ಭಯ ಬಿಸಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ಧಿಗಿಲ್ ದಬಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಕೂರಕ್ ಕುಕ್ರಳ್ಳಿಕೆರೆ ವ್ಹಾ ವ್ಹಾ
ತೇಲಕ್ಕ್ ಕಾರಂಜಿಕೆರೆ ವ್ಹಾ ವ್ಹಾ
ಹೇ ಕೂರಕ್ ಕುಕಳ್ಳಿಕೆರೆ
ತೇಲಕ್ಕ್ ಕಾರಂಜಿಕೆರೆ
ಲವ್ವಿಗೆ ಈ ಲವ್ವಿಗೆ
ಚಾಮುಂಡಿ ಬೆಟ್ಟ ಇದೆ
ಕಣಂಬಾಡಿ ಕಟ್ಟೆ ಇದೆ
ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ಧಿಗಿಲ್ ದಬಾಕಿ
ಲವ್ ಮಾಡಿ ಲವ್ ಮಾಡಿ ಲವ್ ಮಾಡಿ

Поcмотреть все песни артиста

Sanatçının diğer albümleri

Benzer Sanatçılar