Kishore Kumar Hits

Hamsa Lekha - Bareyada Mounada Kavithe (From "Sparsha") şarkı sözleri

Sanatçı: Hamsa Lekha

albüm: Sudeep Hits


ಬರೆಯದ ಮೌನದ ಕವಿತೆ
ಹಾಡಾಯಿತು
ಎದೆಯಲಿ ನೆನಪಿನ ನೋವು
ಸುಖ ತಂದಿತು

ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ

(ಸಸ
ನಿಸಗಮಪ ಮಪಾ
ದದ
ಮಪದನಿಸ ನಿಸಾ ಪಾಮಗ
ಸಸ
ನಿಸಗಮಪ ಮಪಾ
ದದ
ಮಪದನಿಸ ನಿಸಾ ಪಾಮಗ)
ಹೂವ ಕಂಪು ಪರರಿಗಾಗಿ ಸಕಲ ಜನ್ಮವು
ಪರರ ಬಾಳು ಬೆಳಗಿದಾಗ ಬಾಳು ಪೂರ್ಣವು
ಕಾಲ ಬರೆದ ಹೊಸತು ಹಾಡು ಹಾಡಲಾರೆನು
ಮನದ ಪುಟದೀ ಬರೆದ ಗೀತೆ ಮರೆಯಲಾರೆನು
ಎಲ್ಲಿಯ ಬಂಧವು ಕಾಣೆ ಬೆಸೆಯಿತು ಜೀವಕೆ ಜೀವ
ಅರ್ಪಣೆ ಮಾಡುವೆ ನಿನಗೆ ನನ್ನ ಈ ಹೃದಯದ ಭಾವ
(ಸಸರಿ ಸಸಗ ಸಸರಿ ಸಸ)
ಬರೆಯದ ಮೌನದ ಕವಿತೆ ಹಾಡಾಯಿತು
ಎದೆಯಲಿ ನೆನಪಿನ ನೋವು ಸುಖ ತಂದಿತು
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ

ಯಾವ ಹೂವು ಯಾರ ಮುಡಿಗೋ ಅವನ ಆಟದೀ
ಚೈತ್ರ ಬಂದು ಹೋಯಿತ್ತಮ್ಮ ನನ್ನ ತೋಟದೀ
ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು
ನುಡಿಸುವವನು ಸ್ವರವ ಬೆರಸಿ ಸಾಟಿ ಕಾಣೆನು
ಬಾಳಲಿ ಪಡೆದುದು ಏನೋ ಅರಿಯದೆ ಕಳೆದುದು ಏನೋ
ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಏನೋ
(ಸಸರಿ ಸಸಗ ಸಸರಿ ಸಸ)
ಹೃದಯದಿ ಪ್ರೇಮ ತರಂಗ ನೀ ಮೀಟಿದೆ
ಬದುಕಿಗೆ ನೂತನ ಅರ್ಥ ನೀ ನೀಡಿದೆ
ಸುಮಧುರ ಅನುಭವ ನೂರು ನಾ ನೋಡಿದೆ
ನೆಡೆಯುವ ಮುಂದಿನ ದಾರಿ ಮರೆ ಎಂದಿದೆ ನಡೆ ಎಂದಿದೆ ಗುರಿ ತೋರಿದೆ

Поcмотреть все песни артиста

Sanatçının diğer albümleri

Benzer Sanatçılar