Hamsa Lekha - Meghakke Megha (From "Kiccha") şarkı sözleri
Sanatçı:
Hamsa Lekha
albüm: Sudeep Hits
ಮೇಘಕ್ಕೆ ಮೇಘ
ನೀ ಕೊಡುವಾಗ
ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾವೀಗ
ಹೂವಿಗೆ ಹೂವ
ನೀ ಕೊಡುವಾಗ
ಹುಟ್ಟಿದ ಪುಳಕ ನಾವೀಗ
ಹೃದಯಕ್ಕೆ ಹೃದಯ ನೀ ಕೊಡುವಾಗ
ಹೇ ಹುಟ್ಟಿದ ಪ್ರೀತಿಯು ನಾವೀಗ
ಅಧರಕ್ಕೆ ಆಧರ ನೀ ಕೊಡುವಾಗ
ಹೇ ಹುಟ್ಟಿದ ಮಧುವು ನಾವೀಗ
ಹರೆಯದೊಳ್ ರೂಪಿಳಿದು ಮಿಂಚಾಯಿತು ಬಹುಶ:
ಪುರುಷನೊಳ್ ಆ ಮಿಂಚಿಳಿದು ಗುಡುಗಾಯಿತು ಬಹುಶ:
ಮೊದಲೊಲವಿದೆ ಬಹುಶ:
ಶೀಲದೊಳ್ ನಿಜವಿಳಿದು ಒಲವಾಯ್ತು ಬಹುಶ:
ತನುವಿನೊಳ್ ಆ ಒಲವಿಳಿದು ಬೆವರಾಯ್ತು... ಬಹುಶ:
ಎದೆ ಮಳೆಯಿದೆ ಬಹುಶ:
ಮೈಯಲ್ಲಿ ಸಿಗ್ಗಿಲ್ಲೊ
ಮಾತಲ್ಲಿ ಎಗ್ಗಿಲ್ಲೊ
ಒಲವಾದರು ಮೊಗ್ಗಲ್ಲಿ
ಭೂಕಂಪ ತಗ್ಗಿಲ್ಲೊ
ಪ್ರೀತಿ ನಡುಗಿದೆ
ಪ್ರೀತಿ ಗುಡುಗಿದೆ
ಪ್ರೀತಿ ಅರೆಘಳಿಗೆ
ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾವೀಗ
ಕಂಗಳೊಳ್ ಕಂಗಳಿಳಿದು ಕಸಿಯಾಯ್ತು ಪ್ರಾಯಶ:
ಸ್ಪರ್ಷದೊಳ್ ಆ ಸುಖಗಳಿಳಿದು
ಬಿಸಿಯಾಯ್ತು ಪ್ರಾಯಶ:
ಸುಮಶರವಿದೆ ಪ್ರಾಯಶ:
ರೋಮದೊಳ್ ನವಿರಿಳಿದು ಹೆಣ್ಣಾಗಿ ಪ್ರಾಯಶ:
ನರಗಳಲೊಳ್ ಅವಳ್ ನಲ್ಲೆಯಾಗಿ ನಡೆದಾಡಿ ಪ್ರಾಯಶ:
ಎದೆ ಒದೆಯಿತೆ ಪ್ರಾಯಶ:
ಡವ್ ಡವ್ ಡವ್ ಢವಗುಡಿಸಿ
ಹೃದಯನ ಹಧಗೊಳಿಸಿ
ಹೆಣ್ಣಿಲ್ಲದೆ ಬಾಲಿಲ್ಲ
ಎಂದವಳೇ ನನ್ನರಸಿ
ಪ್ರೀತಿ ಆಸೆಗೆ
ಪ್ರೀತಿ ಆಣೆಗೆ
ಪ್ರೀತಿ ಅರಸನಿಗೆ
ಮೇಘಕ್ಕೆ ಮೇಘ
ನೀ ಕೊಡುವಾಗ
ಹುಟ್ಟಿದ ಮಳೆಯೂ ನಾನೀಗ
ಹೂವಿಗೆ ಹೂವ
ನೀ ಕೊಡುವಾಗ
ಹುಟ್ಟಿದ ಪುಳಕ ನಾವೀಗ
ಹೃದಯಕ್ಕೆ ಹೃದಯ ನೀ ಕೊಡುವಾಗ
ಹೇ ಹುಟ್ಟಿದ ಪ್ರೀತಿಯು ನಾವೀಗ
ಅಧರಕ್ಕೆ ಆಧರ ನೀ ಕೊಡುವಾಗ
ಹೇ ಹುಟ್ಟಿದ ಮಧುವು ನಾವೀಗ
Поcмотреть все песни артиста
Sanatçının diğer albümleri