Kishore Kumar Hits

Hamsa Lekha - Muddadendide Mallige (From "Gadibidi Ganda") şarkı sözleri

Sanatçı: Hamsa Lekha

albüm: Crazy Star Ravichandran Kamanu Darling


ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ
ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲು ಮುಡಿಯಬೇಕು
ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು
ಮನಸಿನ ಮಧುವಿನ ಮಹಲೊಳಗೆ ಮದನ ಮಣಿಯಬೇಕು
ಸುರತಿಯ ಪರಮಾನ್ನ ಹಿತಮಿತವಿರಬೇಕು
ವಿರಹಬಾಧೆ ದಹಿಸುವಾಗ ಬಾಲಬೋಧೆ ಏಕೆ
ಪ್ರಣಯ ನದಿಯೆ ತುಳುಕುವಾಗ ಮದನ ಮಳೆಯು ಬೇಕೇ
ಹಿಡುದುಕೊ ಮೆಲ್ಲಗೆ
ತಡೆದುಕೊ ಮಲ್ಲಿಗೆ
ಹರೆಯ, ನೆರೆಯ, ತಡೆಯೋ ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ
ಘಮ ಘಮ ಸಂಪಿಗೆಯ ಸುಮತಿಯನು ಕೆಣಕಿ ಕಾಯಿಸದಿರು
ಕುಸುಮದ ಎದೆಯೊಳಗೆ ಪ್ರಳಯವ ತಾರದಿರು
ಹಿಡಿಯಲಿ ಹಿಡಿಯುವ ನಡುವಿನಲಿ ಬಳುಕಿ ಬೇಯಿಸದಿರು
ತುಂಬಿದ ನಿಶೆ ಒಲೆಗೇ ಚಂದ್ರನ ಕೂಗದಿರು
ಎದೆಯ ಸೆರಗ ಮೋಡದಲ್ಲಿ ನೀನೆ ಚಂದ್ರನೀಗ
ಹೃದಯ ಮೇರು ಗಿರಿಗಳಲ್ಲಿ ಕರಗಬೇಕೆ ಈಗ
ಬಳಸಿಕೋ ಕಂಪಿಗೆ
ಸಹಿಸಿಕೋ ಸಂಪಿಗೆ
ಹರೆಯ, ಹೊರೆಯ, ಇಳಿಸೋ ಇನಿಯ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಮಲ್ಲಿಗೆಯಾ ಮೊದಲು ಸಂಪಿಗೆಯಾ
ಸಂಪಿಗೆಯಾ ಮೊದಲು ಮಲ್ಲಿಗೆಯಾ
ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ
ಇಡಬೇಕೋ ಮನಸು ಕೊಡಬೇಕೋ
ಕೊಡಬೇಕೋ ಮನಸು ಇಡಬೇಕೋ

Поcмотреть все песни артиста

Sanatçının diğer albümleri

Benzer Sanatçılar