ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಭಳೇ ಕಾಣುವ ದೈವವೇ ಕಂಬನಿ ಇಟ್ಟರೇ ಬದುಕಿಗೆ ಅರ್ಥ ಎಲ್ಲಿದೆ? ಕರುಣೆ ಕಣಜವೇ ಕೊರಗಿ ನಿಂತರೆ ನನ್ನುಸಿರೆ ನನ್ನ ಕೊಂದಿದೆ ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಪ್ರಾಣ ಒತ್ತೆ ಇಟ್ಟು ಜನ್ಮ ನೀಡುವಳು ತಾಯಿ ಇಲ್ಲಿ ಒಬ್ಭಳೇ ಕಾಣುವ ದೈವವೇ ಕಂಬನಿ ಇಟ್ಟರೇ ಬದುಕಿಗೆ ಅರ್ಥ ಎಲ್ಲಿದೆ? ಕರುಣೆ ಕಣಜವೇ ಕೊರಗಿ ನಿಂತರೆ ನನ್ನುಸಿರೆ ನನ್ನ ಕೊಂದಿದೆ (ಋಣಿಯೇ ನಿನಗೆ ನಾನು ಅಮ್ಮ) ಕಂದ ಕೂಗೋ ಕರೆಯೇ ಅಮ್ಮ ನಿನ್ನ ಮಡಿಲಲಿ ಮಲಗುವಾಸೆ ಮನದಲಿ ನಾ ಕೂಸೇ ನಿನ್ನ ಬಿಟ್ಟು ನಾನು ಎಲ್ಲೂ ಹೋಗಲಾರೆ ನೀನೆ ನನ್ನ ಜಗವೇ ಕೈಯನು ಹಿಡಿದು ನೀ ನನ್ನನ್ನು ನಡೆಸಿದೆ ಕುರುಡನೇ ನಾನು ಅಮ್ಮ ಹಾದಿಯೇ ಕಾಣದ ನನ್ನಯ ಪಯಣದಿ ಧ್ರುವತಾರೆ ನೀನಮ್ಮ ನೋವ ಮರೆಸೋ ನಗುವೇ ಅಮ್ಮ ಜೋಜೋ ಲಾಲಿಯಲ್ಲಿ ಜಗವನ್ನೇ ಮರೆಸುವ ದೇವತೆ ಅಮ್ಮ ಎಷ್ಟೇ ತಪ್ಪು ಮಾಡಿದರು ಕ್ಷಮಿಸುವ ಜೀವಿ ನೀನೆ ಅಮ್ಮ ಸ್ವಾರ್ಥವೇ ಇಲ್ಲದ ಅರ್ಥಕ್ಕೂ ಮೀರಿದ ಭಾವನೆಯೇ ನೀನಮ್ಮ ಜೀವವೇ ಹೋದರು ಕೊನೆಯ ಉಸಿರಲು ನಿನ್ನ ಕಾಯುವೆನಮ್ಮ (ಋಣಿಯೇ ನಿನಗೆ ನಾನು ಅಮ್ಮ)