ಹುಲಿಗೂ ಗುರಿಕಾರನಿಗೂ
ತಲೆಗೂ ನೇಣ್ಗಲ್ಲಿಗೂ
ಉರಿವ ದಾವಾಗ್ನಿಗೂ
ಸುರಿವ ಮಳೆಗಲ್ಲಿಗೂ
ರವಿಗೂ ಕಾರ್ಮೋಡಕೂ
(ದೋಸ್ತಿ
ದೋಸ್ತಿ)
ಊಹಿಸದ ಪಾತ್ರದ ಚಿತ್ರ
ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ ನೀಡುವುದೋ, ಬೇಡುವುದೋ
♪
(ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದಂ ದಂದರ ದಂ ದಂ ದಂ)
ಕಡಲಾಗ್ನಿಗೂ ಜಡಿ ಸೋನೆಗೂ ದೋಸ್ತಿ
ವಿಧಿ ಬರಹಕೂ ಎದುರೀಜಿಗೂ ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ
(ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದಂ ದಂದರ ದಂ ದಂ ದಂ)
♪
ಅನಿರೀಕ್ಷಿತ ಗಾಳಿ ಅಪಾರ
(ಅಳಿಸುತಿದೆ ಇಬ್ಬರ ದೂರ)
ಇರಬಹುದೇ ಹೀಗೆ ಸದಾ ನಗು ಜೊತೆ ವೈರವು?
ನಡೆದಾಡೋ ದಾರಿಯು ಒಂದೇ
(ಹುಡುಕಾಡೋ ರೀತಿಯು ಬೇರೆ)
ಮುರಿಯುವುದೇ ಸ್ನೇಹಬಂಧ ಒಂದೇ ಕ್ಷಣ ನಡುವಲಿ?
ತವಕದಿ ಭಗ ಭಗ ಉಕ್ಕಿ ಬರುವ ಪ್ರವಾಹದೋಟವಿದು
ಮೊದಲೇ ತಿಳಿಸದೆ ಎದುರು ಬರುವ ತಪ್ಪದ ತಿರುವು ಇದು
ಊಹಿಸದ ಪಾತ್ರದ ಚಿತ್ರ
ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ ನೀಡುವುದೋ, ಬೇಡುವುದೋ
(ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದಂ ದಂದರ ದಂ ದಂ ದಂ)
ಬಡಬಾಗ್ನಿಗೂ ಜಡಿಸೋನೆಗೂ ದೋಸ್ತಿ
ಬಲಶಾಲಿಗೂ ಬಲಶಾಲಿಗೂ ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ
♪
ಒಂದು ಹಸ್ತ ರಕ್ಷಣೆ ಬಲವು
(ಮತ್ತೊಂದು ಮೃತ್ಯುವಿನೊಲವು)
ಎಡಬಲವು ತೋರೋ ಬಲಾಬಲ ಛಲ ಆಟವು
ಒಬ್ಬರದು ದಾರುಣ ಶಸ್ತ್ರ
(ಒಬ್ಬರದು ಮಾರಣ ಶಾಸ್ತ್ರ)
ತೆರೆ ಸರಿದು ಹೋದರೆ ಮೊಳಗದೆ ಪ್ರಮಾದ ನಿನಾದವು
ತಪ್ಪದು ಎನ್ನುವ ಸಮಯದಲ್ಲಿ ನಡೆಯುವ ಸಮರದಲಿ
ಸೋಲುವನಾರೋ ಗೆಲುವರಾರೋ ಹೇಳುವರಾರಿಲ್ಲಿ
ಊಹಿಸದ ಪತ್ರದ ಚಿತ್ರ
ಕರಬೆಸೆದ ಸ್ನೇಹ ವಿಚಿತ್ರ
ಪ್ರಾಣಕ್ಕಿದು ಪ್ರಾಣ ನೀಡುವುದೋ, ಬೇಡುವುದೋ
(ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದರದಂ ದರದಂ ದರದಂದಂ
ದಂ ದಂದರ ದಂ ದಂ ದಂ)
ಕಡಲಾಗ್ನಿಗೂ ಜಡಿ ಸೋನೆಗೂ ದೋಸ್ತಿ
ವಿಧಿ ಬರಹಕೂ ಎದುರೀಜಿಗೂ ದೋಸ್ತಿ
ಉರಿಜ್ವಾಲೆಗೆ ಹಿಮಗಿರಿ ನೀಡಿದ ಅಪ್ಪುಗೆ ಈ ದೋಸ್ತಿ
Поcмотреть все песни артиста
Sanatçının diğer albümleri