Kishore Kumar Hits

Bharath B J - Ellu Maarada Hridaya şarkı sözleri

Sanatçı: Bharath B J

albüm: Simpallag Innondh Love Story


ಎಲ್ಲೂ ಮಾರದ ಹೃದಯ
ನನಗೆ ಉಚಿತ ನೀಡುವೆಯಾ
ಕಳೆದ್ಹೋದ ನನ್ನ ಕಿಸೆಯ
ಎದೆಯ ತುದಿಗೆ ತಲುಪಿಸೆಯಾ
ನಿನ್ಹೆಸರಿಗೆ ಜೂಜಾಡಿ ನೀ ಸಿಗದೇ ಪರದಾಡಿ
ಸೋತಿರುವ ನನ್ನನ್ನು ಅಡವಿಟ್ಟುಕೋ ನೀನು
ಅನುದಿನವೂ ಮೂಡೋ ಆ ಸೂರ್ಯನು ನಾನೇ
ಪ್ರತಿಕ್ಷಣವೂ ಕರಗೋ ಮೇಣವು ನೀನೇನೇ
ಸೂರ್ಯನು ನಾ ಇರುಳು ಗೋಚರಿಸೋ ತನಕ
ಮೇಣವು ನೀ ಕರಗಿ ನೀಡುವೆಯಾ ಬೆಳಕ

ಹೂವಿನ ಜೊತೆ ಸಹವಾಸ ಕೈಚಾಚೋ ರಭಸ
ಮಂಡಿಯೂರೋ ಅಭ್ಯಾಸ ಶುರು ಆಗಿದೆ
ಹಸಿ ಹಸಿ ಸಂಕೋಚ ನನ್ನಲ್ಲಿ ಸುಮ್ಸುಮ್ನೆ ಚೆಲ್ಲಿ
ಬಾಂಧವ್ಯ ಸಂಕೋಲೆ ಬಿಗಿದಾಗಿದೆ
ಈ ಹೊಸ ಬೇನೆಯ ನಾ ಸವಿಯೋ ಸುಖಕೆ
ಎಲ್ಲೂ ಕಾಣದ ಹೊಸತು ಜಗಕೆ
ನಿನ್ನ ಕರೆದು ಕೊಂಡೊಯ್ಯೋ ಬಯಕೆ
ಜೊತೆಗಿರು ನೀ ನನ್ನ ಕೊನೆಯುಸಿರಿರೋ ತನಕ
ಕೊನೆಯುಸಿರೇ ಬೇಡ ಅವಳಿರುವಾ ತನಕ
ಸೂರ್ಯನು ನಾ ಇರುಳು ಗೋಚರಿಸೋ ತನಕ
ಮೇಣವು ನೀ ಕರಗಿ ನೀಡುವೆಯಾ ಬೆಳಕ

ಕನ್ನಡಿಯು ನನ್ನ ಬೇಡಿ ಮನಸೆಲ್ಲ ಕದಡಿ
ನಿನ್ನನ್ನೇ ತೋರೆಂದು ಗೋಗರೆದಿದೆ
ಆ ನಿನ್ನಯ ಚಿತ್ತಾರ ತಗುಲಿಸೋ ಸಮರ
ನಮ್ಮನೆಯ ಗೋಡೇಲಿ ಸಜ್ಜಾಗಿದೆ
ಏಕೋ ಏಕಾಂತ ನಿನ್ನ ವಿನಹ
ಇರಲು ಮಧುರ ನನ್ನ ವಿರಹ
ಕನಸೇ ಬೀಳು ಪುನಃ ಪುನಃ
ಜೊತೆಗಿರು ನೀ ನನ್ನ ಕೊನೆಯುಸಿರಿರೋ ತನಕ
ಕೊನೆಯುಸಿರೆ ಬೇಡ ಅವಳಿರುವ ತನಕ
ಸೂರ್ಯನು ನಾ ಇರುಳು ಗೋಚರಿಸೋ ತನಕ
ಮೇಣವು ನೀ ಕರಗಿ ನೀಡುವೆಯಾ ಬೆಳಕ

Поcмотреть все песни артиста

Sanatçının diğer albümleri

Benzer Sanatçılar