ಪ್ರೀತಿ ಮಾರುಮ ಸಂತೆಯಲಿ ಬೆಲೆ ಇಲ್ಲದಾ ಹೂವು ನಾನು ಪದವಿಲ್ಲದ ಹಾಡು ನಾನು ♪ ಗೂಡಲ್ಲಿ ಹೇಗೋ ಬದುಕಿದ್ದೆ ನಾನು ಬಯಲಾಸೆ ತೋರಿ ನೀ ಕರೆದೆ ಎದೆಯಾಳದಲ್ಲಿ ರಂಗೋಲಿ ಬರೆದೆ ಬಣ್ಣ ಬಣ್ಣದ ಕನಸ ಸುರಿದೆ ಸುಳಿಗಾಳಿಯೊಂದು ಎದುರಾಗೋ ಮುನ್ನ ಬಿರುಗಾಳಿಯಲ್ಲಿ ಕೈ ಬಿಟ್ಟೆ ನನ್ನ ಬಯಲಾಯ್ತು ನಂಬಿಕೆಯ ಕವಲು ಇಳಿದ್ಹೋಯ್ತು ಈ ಪ್ರೀತಿ ಅಮಲು ಗೂಡಲ್ಲಿ ಹೇಗೋ ಬದುಕಿದ್ದೆ ನಾನು ಬಯಲಾಸೆ ತೋರಿ ನೀ ಕರೆದೆ ♪ ಚೂರುಚೂರಾಯ್ತು ನಕ್ಷತ್ರ ನೂರು ನಿಂತಲ್ಲೇ ನಿಂತ್ಹೋಯ್ತು ತೇರು ಹೊರೆಯಾಯ್ತು ವಿಷವಾಯ್ತು ಉಸಿರು ಬೆಸೆದಂಥ ಬೆರಳು ಜೊತೆಯಿದ್ದ ನೆರಳು ದೂರಾಗಿ ಬದುಕೀಗ ಇರುಳು ಮರೆಯಾಯ್ತು ಮುಗುಳು ಬಿಗಿಯಾಯ್ತು ಕೊರಳು ದೂರಾಯ್ತು ಸಂತೈಸೋ ಹೆಗಲು ಅನುಮಾನದಿಂದ ಅನುರಾಗ ಕೊಂದೆ ಅನುಗಾಲ ನಿನಗೆ ನೋವನ್ನೇ ತಂದೆ ಮಾತಿಂದ ಒಡೆದ್ಹೋಯ್ತು ಮನಸೆ ದಯಮಾಡಿ ನನ್ನನ್ನು ಕ್ಷಮಿಸೆ ಬೆಸೆದಂಥ ಬೆರಳು ಜೊತೆಯಿದ್ದ ನೆರಳು ದೂರಾಗಿ ಬದುಕೀಗ ಇರುಳು