ಮನದೊಳಗಿನ ಮಿಡಿತ ಕನಸಲ್ಲಿ ಕಾಡೋ ಕಣ್ಗಳಿಗೆ ನೆನಪುಗಳದೆ ಮೊರೆತ, ಅಲೆಯಾಗಿ ಬಾ ಬಳಿಗೆ ಹೊರಟಿರುವೆ ನಾನು ನನ್ನುಳಿದ ಹೃದಯವ ಹುಡುಕುತಲಿ ಸಹಕರಿಸು ನೀನು ಸೆರೆಯಾಗಿ ತೋಳಲ್ಲಿ ನೀ ನೀಡಿರೋ ಸಜೆಗೆ ಸೆರೆವಾಸ ಮುಗಿಸಾಗಿದೆ ಅನುರಾಗದ ಅಲೆಗೆ ಆ ಬಾಲ್ಯ ಬೆರೆತಾಗಿದೆ ಶುರು ಮಾಡಿದ ಮರಳ ಗೂಡು ಈಗ ನೀನೇ ಪೂರ್ತಿ ಮಾಡು ಸನಿಹ ಬಾರೆ ನೀ ಮಾಯಾಜಿಂಕೆ ಮನದೊಳಗಿನ ಮಿಡಿತ ಕನಸಲ್ಲಿ ಕಾಡೋ ಕಣ್ಗಳಿಗೆ ನೆನಪುಗಳದೆ ಮೊರೆತ, ಅಲೆಯಾಗಿ ಬಾ ಬಳಿಗೆ ♪ ನೀ ಬರೆದ ಆಸೆಗಳ ತೀರಿಸುವ ಬಯಕೆ ಅಗೆದಷ್ಟು ಬೊಗಸೆ ನೆನಪು, ಆ ನೆನಪೇ ಹುರುಪು ಎಲ್ಲ ಅರ್ಧ ಬರೆದ ಕಾದಂಬರಿ ಪೂರ್ತಿ ಮಾಡುವ ಕನಕಾಂಬರಿ ಮನದೊಳಗಿನ ಮಿಡಿತ ಕನಸಲ್ಲಿ ಕಾಡೋ ಕಣ್ಗಳಿಗೆ ನೆನಪುಗಳದೆ ಮೊರೆತ, ಅಲೆಯಾಗಿ ಬಾ ಬಳಿಗೆ ♪ ಕಿಸೆಯೊಳಗೆ ನೀ ನಗುವ ಭಾವಚಿತ್ರ ಒಂದಿದೆ ಜೊತೆ ನಿಂತು ಏಳು ಹೆಜ್ಜೆ ಇಡೋ ಬಯಕೆ ಬಂದಿದೆ ಕಾಲ ಸರಿದೂಗಿಸಿ ಕೂಡಿ ಬಂದಿದೆ ಸೇರು, ನನ್ನ ಒಲವೇ, ಜೀವ ಮಿಡಿದಿದೆ ಚಡಪಡಿಸಿದೆ ಮನವು ಮರೆಯಾದ ಆ ಕಣ್ಗಳಿಗೆ ನೆನಪುಗಳದೆ ಮೊರೆತ, ಅಲೆಯಲ್ಲಿ ಕಳೆದುಹೋದೆ