ಕನಸಿನಲಿ ನಾ ನಡೆವೆ ನಿನ್ನ ಜೊತೆಗೆ (ನಿನ್ನ ಜೊತೆಗೆ) ಒಲವಿನಲಿ ಮೈಮರೆತು (ಮೈಮರೆತು) ಬರುತಲಿವೆ ಬಣ್ಣಗಳು ನಮ್ಮ ಕಥೆಗೆ (ನಮ್ಮ ಕಥೆಗೆ) ಮನಸುಗಳು ತಾ ಬೆರೆತು (ತಾ ಬೆರೆತು) ಬೆಳಕೆ ಮೂಡಿದಂತೆ, ಮೊದಲ ಸ್ಪರ್ಶಕೆ ಮಿತಿಯ ದಾಟಿದಂಥ, ಮಧುರ ಹರ್ಷಕೆ ಪದವೇ ಇಲ್ಲ ಈ ಮೋಹಕೆ ಇದ್ದಲ್ಲೇ ಒಂದಾಗಿ ಮಿಡಿದಿದೆ ಹೃದಯ ಅದು ಮುದ್ದಾಗಿ ಏನೆಲ್ಲ ನುಡಿಯುತಲಿದೆಯಾ ಈ ಬಾಯಲ್ಲಿ ನೂರುಂಟು ಸಿಹಿ-ಸಿಹಿ ವಿಷಯ ಎದೆಗೂಡಲ್ಲಿ ಈಗೊಂದು ಚಂದ್ರನ ಉದಯ ಕನಸಿನಲಿ ನಾ ನಡೆವೆ ನಿನ್ನ ಜೊತೆಗೆ (ನಿನ್ನ ಜೊತೆಗೆ) ಒಲವಿನಲಿ ಮೈಮರೆತು (ಮೈಮರೆತು) ♪ ನಾನೆಂದಿಗೂ ಕಂಡಿಲ್ಲ, ಇಂಥ ಆತ್ಮೀಯತೆ ಇನ್ನೆಲ್ಲೂ ಒಂದಾಗುತ ಈ ಜೀವ, ಹಬ್ಬವಾಗುತ್ತಿದೆ ಊರಲ್ಲೂ ಇರೋ ನೋವೆಲ್ಲವು ಮರೆಯಾದಂತಿದೆ ಒ ಕಾಲವೇ, ನೀನಿಲ್ಲಿಯೇ ನಿಲ್ಲು ಇದ್ದಲ್ಲೇ ಒಂದಾಗಿ ಮಿಡಿದಿದೆ ಹೃದಯ ಅದು ಮುದ್ದಾಗಿ ಏನೆಲ್ಲ ನುಡಿಯುತಲಿದೆಯಾ ಈ ಬಾಯಲ್ಲಿ ನೂರುಂಟು ಸಿಹಿ-ಸಿಹಿ ವಿಷಯ ಎದೆಗೂಡಲ್ಲಿ ಈಗೊಂದು ಚಂದ್ರನ ಉದಯ ಕನಸಿನಲಿ ನಾ ನಡೆವೆ ನಿನ್ನ ಜೊತೆಗೆ (ನಿನ್ನ ಜೊತೆಗೆ) ಒಲವಿನಲಿ ಮೈಮರೆತು ♪ ನೀನಾದರೆ ಸಂಗಾತಿ, ಆಗ ನಾನಾಗುವೆ ಸಂಪೂರ್ಣ ಈ ಲೋಕದ ಕಣ್ಣಲ್ಲಿ, ನಮ್ಮ ಸಂಬಂಧವೇ ಸಂಕೀರ್ಣ ಮರು ಮಾತಾಡದೆ ಮುಗುವಾದಂತಿದೆ ಮುಂಜಾವಿನ ತಂಗಾಳಿಯ ಬಣ್ಣ ಒಂಚೂರು ಸಂಕೋಚ ಅಡಗಿದೆ ಒಳಗೆ ಕೊಡು ಕೈಯಲ್ಲಿ, ಕೈ ಇಟ್ಟು ಭರವಸೆ ನನಗೆ ನಾ ಹೇಗಿದ್ದೆ, ಹೇಗಾದೆ, ಒಲವಿನ ಕರೆಗೆ ಇರಬೇಕಿಲ್ಲ ನೀನಿನ್ನು ಕೊರದೆಯ ಮರೆಗೆ