ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
♪
ಅಡಿಯೇ ಮುಟ್ಟ ನೀಳ ಜಡೆ
ಮುಡಿಯ ತುಂಬಾ ಹೂವು ಹೆಡೆ
ಅಡಿಯೇ ಮುಟ್ಟ ನೀಳ ಜಡೆ
ಮುಡಿಯ ತುಂಬಾ ಹೂವು ಹೆಡೆ
ಇವಳು ಅಡಿಯಾ ಇಟ್ಟ ಕಡೆ
ಇವಳು ಅಡಿಯಾ ಇಟ್ಟ ಕಡೆ
ಹೆಜ್ಜೆ ಹೆಜ್ಜೆಗೆ ಒಂದು ದೊಡ್ಡ ಮಲ್ಲಿಗೆ
ಇವಳು ಯಾರು ಬಲ್ಲೆಯೇನು
♪
ಅಂಗಾಲಿನ ಸಂಜೆ ಗೆಂಪು
ಕಾಲಂದುಗೆ ಗೆಜ್ಜೆ ಇಂಪು
ಅಂಗಾಲಿನ ಸಂಜೆ ಗೆಂಪು
ಕಾಲಂದುಗೆ ಗೆಜ್ಜೆ ಇಂಪು
ಮೋಹದ ಮಲ್ಲಿಗೆಯ ಕಂಪು ಕರೆದದೆನ್ನನು
ನಾನು ಹಿಡಿಯ ಹೋದೆನು
ಇವಳು ಯಾರು ಬಲ್ಲೆಯೇನು
♪
ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿಂಚು ಬೆಳಗೆ
ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿಂಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ ಮೆರೆಯುತಿದ್ದಳು
ನನ್ನ ಕರೆಯುತಿದ್ದಳು
ಇವಳು ಯಾರು ಬಲ್ಲೆಯೇನು
♪
ತಾರೆಯಿಂದ ತಾರೆಗವಳು
ಅಡಿಯಿಡುವುದ ಕಂಡೆನು
ಹೂವನೆಸೆದು ನಡೆದಳವಳು
ಒಂದೆರಡನು ತಂದೆನು
ತಾರೆಯಿಂದ ತಾರೆಗವಳು
ಅಡಿಯಿಡುವುದ ಕಂಡೆನು
ಹೂವನೆಸೆದು ನಡೆದಳವಳು
ಒಂದೆರಡನು ತಂದೆನು
ತಂದ ಹೂವೆಗಿನಿತು ಚಂದ
ಮೂಡಿದ ಅವಳನ್ನೆನಯಿರಿ
ಕಾಣಿಸದಾ ವೀಣೆಯಿಂದ
ಹಾಡಿಯಿಳಿವುದಾ ಕೇಳಿರಿ
ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು ನನ್ನ ಸೆಳೆದಳು
Поcмотреть все песни артиста
Sanatçının diğer albümleri