Kishore Kumar Hits

Shimoga Subbanna - Anandamaya Ee Jagahrudaya (From "Bhava Bindu") şarkı sözleri

Sanatçı: Shimoga Subbanna

albüm: Bhaava Gandharvaru - 2- Sanjegenna Payanavendu


ಆನಂದಮಯ ಈ ಜಗ ಹೃದಯ
ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೋ
ಆನಂದಮಯ ಈ ಜಗ ಹೃದಯ
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ
ಆನಂದಮಯ ಈ ಜಗ ಹೃದಯ
ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ
ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ
ರವಿ ವದನವೇ ಶಿವ ಸದನವೋ, ಬರಿ ಕಣ್ಣದು ಮಣ್ಣೋ
ಶಿವನಿಲ್ಲದೇ ಸೌಂದರ್ಯವೇ, ಶವ ಮುಖದ ಕಣ್ಣೋ
ಆನಂದಮಯ ಈ ಜಗ ಹೃದಯ
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ
ಆನಂದಮಯ ಈ ಜಗ ಹೃದಯ
ಏತಕೆ ಭಯ ಮಾಣೋ, ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೋ
ಆನಂದಮಯ ಈ ಜಗ ಹೃದಯ

Поcмотреть все песни артиста

Sanatçının diğer albümleri

Benzer Sanatçılar