Kishore Kumar Hits

Mysore Ananthaswamy - Jaya Karnataka şarkı sözleri

Sanatçı: Mysore Ananthaswamy

albüm: Dhundhubhi


ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಜಯಗೀತೆ ಹಾಡಿ ಸುತರೆಲ್ಲ ಕೂಡಿ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಜಯಗೀತೆ ಹಾಡಿ ಸುತರೆಲ್ಲ ಕೂಡಿ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಕೋಲಾರ ಚಿನ್ನ ಬೇಲೂರು ಚೆನ್ನ
ಮೈಸೂರು ಗಂಧ ತಂದ
ಸಾಹಿತ್ಯ ಕಲೆಯ ಸಂಸ್ಕೃತಿಯ ನೆಲೆಯ
ಆಗರವು ನಮ್ಮ ನೆಲವೂ
ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ
ಕಿತ್ತೂರು ವೀರ ರಾಣಿ
ಕೆಚ್ಚೆದೆಯ ಕಲಿಯ ಮೈಸೂರು ಹುಲಿಯ
ಹೆಮ್ಮೆಯದು ಎಂಬ ಕುಲವು
ಹೆಮ್ಮೆಯದು ಎಂಬ ಕುಲವು
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಲಕ್ಷ್ಮೀಶ ರನ್ನ ನಾಣಪ್ಪ ಜನ್ನ
ಮುದ್ದಣ್ಣ ಹರಿಹರ ಪಂಪ
ಹಿರಿ ಕವಿಗಳಿಂದ ವರ ಪಡೆದು ಬಂದ
ಕನ್ನಡವು ನಮ್ಮ ನುಡಿಯೂ
ಶೃಂಗೇರಿ ಉಡುಪಿ ಗೋಕರ್ಣ ಕ್ಷೇತ್ರ
ಕೊಲ್ಲೂರು ಧರ್ಮಸ್ಥಳವೂ
ನೂರಾರು ಜನರ ಕರಬೀಸಿ ಕರೆವ
ದೇಗುಲವು ಎಮ್ಮ ಗುಡಿಯೂ
ದೇಗುಲವು ಎಮ್ಮ ಗುಡಿಯೂ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಆಗುಂಬೆ ಘಾಟಿಗೆ ಇನ್ನಿಲ್ಲ ಸಾಟಿ
ಭಾಸ್ಕರನು ಪಡುವಣಿಂದ
ಹೊಂಬಣ್ಣ ತಳೆದು ಬಾನಂಚಲ್ಲಿಳಿದು
ಅಸ್ತಮಿಪ ದೃಶ್ಯ ಚಂದ
ಉತ್ತರದ ಸೀಮೆ ಅಂಗನೆಯಾ ಭೀಮೆ
ದಕ್ಷಿಣದ ನಾರಿ ಕಾವೇರಿ
ಸುರಗಂಗೆ ತಂಗಿ ಯಂತಿರ್ಪ ತುಂಗೆ
ಒಳನಾಡ ಮಂಗಳಾಂಗಿ
ಒಳನಾಡ ಮಂಗಳಾಂಗಿ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಕೇರಳದ ಚಿನ್ನ ನೆರೆ ಆಂಧ್ರದಣ್ಣ
ತಮಿಳ್ನಾಡು ನಮ್ಮ ತಮ್ಮ
ಉತ್ತರದ ಮಿತ್ರ ಭಾರತದ ಪುತ್ರ
ಉತ್ತರದ ಮಿತ್ರ ಭಾರತದ ಪುತ್ರ
ಎಂದೆಣಿಪ ಬೆಂಗಳೂರು
ಏಲಕ್ಕಿ ಇಂಗು ಗೋಡಂಬಿ ತೆಂಗು
ಕರಿ ಮೆಣಸು ಜಾಯಿಕಾಯಿ
ಹೋರನಾಡುಗಳಿಗೆ ಹಡಗಲ್ಲಿ ಕಳಿಪ
ಬಂದರವು ಮಂಗಳೂರು
ಮಂಗ್ಳುರೇ ಚೆಂದ ಬೆಂಗ್ಳೂರೇ ಅಂದ
ಮೈಸೂರು ಬೃಂದಾವನ
ಮಂಗ್ಳುರೇ ಚೆಂದ ಬೆಂಗ್ಳೂರೇ ಅಂದ
ಮೈಸೂರು ಬೃಂದಾವನ
ಧಾರವಾಡ ಮಂಡ್ಯ ಶಿವಮೊಗ್ಗ ದುರ್ಗ
ಧಾರವಾಡ ಮಂಡ್ಯ ಶಿವಮೊಗ್ಗ ದುರ್ಗ
ಗುಲ್ಬರ್ಗ ರಾಯಚೂರು
ಬಳ್ಳಾರಿ ಸೇರಿ ಉಳಿದೆಲ್ಲ ಜಿಲ್ಲೆ
ಒಂದೊಂದು ಮುತ್ತಿನಂತೆ
ಹತ್ತಕ್ಕೆ ಮತ್ತೆ ಒಂಬತ್ತು ಸೇರಿ
ಈ ನಾಡು ಜೆನಿಸಿತಂತೆ
ಈ ನಾಡು ಜೆನಿಸಿತಂತೆ
ಜಯ ಕರ್ನಾಟಕ ಜಯ ಕರ್ನಾಟಕ
ಜಯ ಕರ್ನಾಟಕ ಮಾತೆ
ಜಯಗೀತೆ ಹಾಡಿ ಸುತರೆಲ್ಲ ಕೂಡಿ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ
ವಂದಿಪೆವು ಜನ್ಮದಾತೆ

Поcмотреть все песни артиста

Sanatçının diğer albümleri

Benzer Sanatçılar