ಹೃದಯದ ಪರಿಪಾಡು ಹೀಗೇಕೆ ಅನಿಸೋದು ಅರಿಯದೆ ಮನಸ್ಸೋತರೆ ಸಮಯದ ಗತಿ ಮೆಲ್ಲ ಹೀಗೇಕೆ ಸಾಗೋದು ನೆನೆಯುತ ನಿನ್ನ ಕಾದರೆ ಬಿಡದೇ ಹಿಡಿದಂಥ ಒಲವ ಮಳೆಗೆ ಮನದ ನೆಲವೆಲ್ಲ ಹಸಿರಾಗಿ ಹೂವಾಗಿದೆ ನಿನ್ನ ಕೊಡುಗೆ ನಿನ್ನ ಸನಿಹಕೆ ಬರುವೆ ಸೊಗಸಾದಂತೆ ಜೊತೆಗಾರಿಕೆ ನಿನ್ನ ಸನಿಹಕೆ ಬರುವೆ ನನ್ನ ಈ ಜೀವ ಕಿರುಕಾಣಿಕೆ ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ ನಿನ್ನಲ್ಲಿದೆ ಕಿವಿಗೊಡು ನೀ... ವಿವರಿಸುವೆ ಬಿಸಿ ಉಸಿರ ಕವಿತೆಗಳ ಕೂಡಿಡುವೆ ಬಿಡಬಿಡದೆ ನೀನಿರುವ ನಿಮಿಷಗಳ ಉಪಗ್ರಹವೇ ನಿನಗೆ ನಾನು ಕನಸುಗಳ ತೆರೆದಿಡುವೆ ಆವರಿಸು ಅಡಿಗಡಿಗೆ ಕೋರಿಕೆಯು ಒಂದೇನೇ ಹೃದಯದಲಿ ಮಿನುಮಿನುಗು ಕೊನೆವರೆಗೂ ಇದೇ ಥರ ನಿನ್ನ ಸನಿಹಕೆ ಒಲವೇ ಸೊಗಸಾದಂತೆ ಜೊತೆಗಾರಿಕೆ ನಿನ್ನ ಸನಿಹಕೆ ಬರುವೆ ನನ್ನ ಈ ಜೀವ ಕಿರುಕಾಣಿಕೆ ನನ್ನ ಬದುಕೆಲ್ಲವ ಸರಿದೂಗುವ ಹೊಣೆಗಾರಿಕೆ ನಿನ್ನಲ್ಲಿದೆ