Kishore Kumar Hits

Rahul Dit-O - Rocky Bhai şarkı sözleri

Sanatçı: Rahul Dit-O

albüm: Rocky Bhai


ರೌಡಿಸಂ ಮಾಡಬೇಕು ಅಂತ ಫೀಲ್ಡ್ಗ್ ಸುಮ್ನೆ ಎಂಟ್ರಿ ಕೊಡೋದಿಲ್ಲ ಇಲ್ಲಿ ಯಾರು
ನಾನ್ ದೊಡ್ಡ ಪಂಟರ್ ಅಂತ ಹೇಳಿಕೊಂಡು ಓಡಾಡಿದ್ರೆ ನಿನ್ನ ಮೇಲೆ ಕಣ್ಣುಗಳು ಸಾವಿರಾರು
ನಂಗೆ ಬೇರೆ ಏನು ಬೇಕಾಗಿಲ್ಲ, ಹೆಸ್ರು ಸಾಕು ಅಂತ ಪಟ್ಟು ಹಿಡಿದು ನಿಂತ್ರೆ ನೇ ಪುಕಾರು
ನಾನೊಬ್ನೆ ಮೇಲೆ ಬಂದು ದುನಿಯನಾಳುತಿನಿ ಅಂದುಕೊಂಡ್ರೆ ಹೋದಲ್ಲೆಲ್ಲ ನಿಂದೆ ದರ್ಬಾರು
ಪ್ರತಿ ಗಲ್ಲಿಯಲ್ಲೂ ಕಾಲು ಮಡುಗುವೆ ಏರಿಯಾ ಪೂರ್ತಿ ನನ್ನದೇ
ಸಿಡಿಮಿಡಿಯುವ ಸಡೆಗಳಿಗೆ ಹೆದ್ರೋದಿಲ್ಲ ನನ್ ಎದೆ
ತಡಿ ತಡಿ ಅಂತ ತಡೆದರೂ ಒಂದು ನಿಮ್ಶ ಸುಮ್ನೆ ನಿಲ್ಲದೇ
ಅಡ್ಡ ಸಿಗೋವ್ರನ್ನು ಲೆಕ್ಕಕಿಲ್ಲದಂತೆ ಅಟ್ಟಡ್ಸ್ಕೊಂಡ್ ಗುಮ್ಮದೆ
ಅನ್ಯಾಯವ ನೋಡಿಕೊಂಡು ಸುಮ್ಮನಿರೋದಿಲ್ಲತಲೆ ತಗ್ಗದೇ
ಬಂಡಾಯವ ಮಾಡೋದಿಲ್ಲ ಬಲಿ ಕೊಡೋಕೆ ಒಬ್ನೇ ನುಗ್ಗದೇ
ಬೆಳೀಬೇಕು ಅನ್ನೋ ಹಠ ಇದ್ರೆ ನಿಂಗು ಟೈಮ್ ಬರ್ತದೇ
ಯಾರ್ಯಾರ್ ಇಲ್ಲಿ ಹೆಂಗ್ ಹೆಂಗ್ ಅಂತ ನಂಗ್ ಚನ್ನಾಗ್ ಗೊತ್ತದೇ
ಕೇಳ್ಸ್ಕೊಲ್ರೊಳೆ ನಂದೇ ಹವಾ ಎಲ್ಲೆಡೆ
ಜಗ್ಗೋದಿಲ್ಲ ಗುಂಪಲ್ ಗುದ್ದಾಡೋಕ್ ಒಂದೆಡೇ
ಕರುಣೆ ಬರೋದಿಲ್ಲಎದುರಾಳಿ ಕಾಲಿಗ್ ಬಿದ್ದರೂ
ಕೇರ್ ಮಾಡೋದಿಲ್ಲ ನೀನ್ಯಾವ ಊರ್ ಡಾನ್ ಆದರೂ
ಏರಿಯಾ ಸುತ್ತ ಸುಮ್ನೆ ಒಂದ್ ರೌಂಡ್ ಬಂದ್ರೆ... (ರಾಕಿ ಭಾಯ್)
ಗಲ್ಲಿ ಗಲ್ಲಿಯಲ್ಲೂ ಗನ್ ಸೌಂಡ್ ನಿಂದೆ... (ರಾಕಿ ಭಾಯ್)
ನೀನ್ ಬಂದಮೇಲೆ ನಿಂದೆ ನೇಮು... (ರಾಕಿ ಭಾಯ್)
ನಮ್ಮೂರಿಗೆ ನೀನೆ ನಂಬರ್ ಒನ್ನು... (ರಾಕಿ ಭಾಯ್)
ರಾಕಿ ಭಾಯ್... ರಾಕಿ ಭಾಯ್... ರಾಕಿ ಭಾಯ್
ಗಡಗಡ ಅಂತ ನಡುನಡುಗಿಸೋ ಗುಡುಗುಡುಗಿನ ಗುಂಡಿಗೆ ಹೆದರೋ
ಎದುರಾಳಿಯ ಎದೆಬಡಿತವ ನಿಲ್ಲಿಸಿ ಬಿಡುವ ನದಿಗೆ
ತನಗೆ ತಲೆ ಕೆಡಿಸುವ ತಲೆಕಡಿಯದ ಬಿದ್ರೆ ಸಾಕು ಕಣ್ಣಿಗೆ ಕೊನೆಗೆ
ಸಡೆಪಡೆಗಳ ಸದೆಬಡಿದು ಸೀದಾ ಕಲಿಸುವೆ ಮನೆಗೆ... ಹ!
ಧಗಧಗ ಅಂತ ಭುಗಿಲೇಳೋ ಈ ಜ್ವಾಲಾಮುಖಿ ಮುಂದೆ ಇದೆ
ಧಗಧಗ ಅಂತ ಉರಿಯೋ ಬೆಂಕಿನ ಆರ್ಸೊ ತಾಕತ್ ಯಾರಿಗೋ ಇದೆ
ನಡೆದು ಬರುವ ಗಟ್ಟಿಗೆ ಬರಬರಸಿಡಿಲೆ ಬಡಿದಂಗಿದೆ
ಸೂರ್ಯ ಮುಳುಗೋ ಹೊತ್ತಿಗೆ ಇಡೀ ಸಾಮ್ರಾಜ್ಯ ಕೈಯಲ್ಲಿದೆ
ಕೊತಕೊತಕೊತ ಕುದಿಯೋ ರಕ್ತ ಗಟಗಟಗಟ ಕುಡಿಯೊಗಂಟ
ಹಸಿವಾಗೋದಿಲ್ಲ, ಊಟ ಸೇರೋದಿಲ್ಲ, ನಿದ್ದೆ ಮಾಡುವಾಗ ನಿದ್ದೆ ಬರೋದಿಲ್ಲ
ಹೊರಟ ಹೊರಟ ಹೊರಟ ಹೊರಟ
ಹೋಗುವ ಜಗದ ಅರಿವಿರಲಿಲ್ಲ
ಹೊಡೆದ ಹೊಡೆದ ಹೊಡೆದ ಹೊಡೆದ
ಹಿಡಿದ ಕೆಲಸ ಬಿಟ್ಟುಬರಲಿಲ್ಲ
ಕೈಹಿಡಿದೋನ್ ಯಾರಲೇ
ನಿಂತಿರ್ತಿನ್ ನಿಂತಲ್ಲೆ
ಗುಂಪ್ ಕಟ್ಕೊಂಡ್ ಬರೋದಿಲ್ಲ
ವಾರ್ಗ್ಒಬ್ನೇ ಬರ್ತೀನಿ ಬಾರಲೇ
ಸ್ವಲ್ಪ ಹುಷಾರಲೇ
ಸಿಕ್ಕಾಕ್ಕೊಂಡ್ರೆ ಬಾರ್ಸಲೇ
ಗ್ಯಾಂಗ್ಸ್ಟರ್ ಅಲ್ಲ, ಮಾನ್ಸ್ಟರ್, ಹೆಸರು ರಾಕಿಂಗ್ ಸ್ಟಾರ್ ಲೇಯ್!!!
ಏರಿಯಾ ಸುತ್ತ ಸುಮ್ನೆ ಒಂದ್ ರೌಂಡ್ ಬಂದ್ರೆ... (ರಾಕಿ ಭಾಯ್)
ಗಲ್ಲಿ ಗಲ್ಲಿಯಲ್ಲೂ ಗನ್ ಸೌಂಡ್ ನಿಂದೆ... (ರಾಕಿ ಭಾಯ್)
ನೀನ್ ಬಂದಮೇಲೆ ನಿಂದೆ ನೇಮ್... (ರಾಕಿ ಭಾಯ್)
ನಮ್ಮೂರಿಗೆ ನೀನೆ ನಂಬರ್ ಒನ್ನು... (ರಾಕಿ ಭಾಯ್)
ರಾಕಿ ಭಾಯ್... ರಾಕಿ ಭಾಯ್... ರಾಕಿ ಭಾಯ್... ರಾಕಿ ಭಾಯ್

Поcмотреть все песни артиста

Sanatçının diğer albümleri

Benzer Sanatçılar