Kishore Kumar Hits

Rahul Dit-O - Obbane şarkı sözleri

Sanatçı: Rahul Dit-O

albüm: Obbane


Lethal A on the beat
ಬಂದಿದ್ದು ಒಬ್ಬನೇ, ಹೋಗೋದು ಕೂಡ ನೀನೊಬ್ಬನೇ
ಅವ್ನಿವ್ನು ಬರ್ತಾನೆ, ಕೆಲ್ಸ ಆಗೋವರೆಗು ಇರ್ತಾನೆ
ಕಚಡ ವರ್ತನೆ, ಮಾಡಿಕೊಳ್ಳೋದು ಸಮರ್ಥನೆ
ಮನಸಿನ್ಯಾತನೇ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ
ಯಾರಿಗೆ ಯಾರಿಲ್ಲ, ಯಾರುನೂ ಬರಲ್ಲ
ಎಲ್ ನೋಡುದ್ರು, ಒಬ್ರು ಕಂಡ್ರೆ ಒಬ್ರಿಗೆ ಆಗಲ್ಲ
ನನಗೆ ನೀನಿಲ್ಲ, ನಿನಗೆ ಅವನಿಲ್ಲ
ನಿಯತ್ತೆ ಹೇಳುತ್ತೆ, ನಿಯತ್ತಾಗಿ ಯಾಕಿಲ್ಲ?
ಬಂದ್ ಹೋಗೋರ list ನೋಡಿ ನಂಗನ್ನ್ಸಿದ್ ಇಷ್ಟೇ
Friendship ಅಲ್ಲಿ ಎಲ್ಲ್ರಿಗಿರಲ್ಲ ನಿಷ್ಠೆ
ಬಂದು ಬಳಗ ಎಲ್ಲ ಪ್ರತಿಷ್ಟೆಗೆ ಅಷ್ಟೇ
ನನ್ parents ನಂಗಿದು ಹೇಳಿದ್ರು first-ಎ
ಯಾವನ್ನೂ ನಂಬಬೇಡ, ಯಾರನ್ನೂ ನಂಬಬೇಡ
ತಂದೆ ತಾಯಿ ಇಷ್ಟ ಪಡೋರನ್ನ ಬಿಟ್ಟು
ಯಾವನ್ಗೂ ಬಿಡಬೇಡ, ಯಾವನ್ಗೂ ಬಿಡಬೇಡ
ತಲೆ ಮೇಲೆ ಕೂತ್ಕೊಳಕ್, lenience ಕೊಟ್ಟು
ಯಾವ್ದಕ್ಕೂ ಸೋಲಬೇಡ, ಯಾವ್ದಕ್ಕೂ ಬೀಳಬೇಡ
ಗೆದ್ದೇ ಗೆಲ್ತೀನ್ ಅಂತ ಗುರಿನ ಮುಟ್ಟು
ಯಾವನ್ಗೂ ಕಾಯಬೇಡ, ಯಾವಳ್ಗೂ ಸಾಯಬೇಡ
ನಿನಗೋಸ್ಕರ ನೀ ಬದ್ಕೊದೇ ಕರೆಕ್ಟು
ಕಾಸಿದ್ದಾಗ ಜನ ಇರ್ತಾರೆ ಜೊತೆ
ಕಷ್ಟ ಬಂದಾಗಲೇ ಎಲ್ಲರು ನಾಪತ್ತೆ
ಯಾರೂ ಇಲ್ಲದಾಗ ಯಾರಿಲ್ಲ ಅನ್ಸುತ್ತೆ
ಎಲ್ರೂ ಇದ್ದಾಗ ಅನ್ಸ್ತು ಬದ್ಕಿದ್ದೂ ಸತ್ತೆ
ಬಂದಿದ್ದು ಒಬ್ಬನೇ, ಹೋಗೋದು ಕೂಡ ನೀನೊಬ್ಬನ
ಅವ್ನಿವ್ನು ಬರ್ತಾನೆ, ಕೆಲ್ಸ ಆಗೋವರೆಗು ಇರ್ತಾನೆ
ಕಚಡ ವರ್ತನೆ, ಮಾಡಿಕೊಳ್ಳೋದು ಸಮರ್ಥನೆ (ಥೂ)
ಮನಸಿನ್ಯಾತನೇ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ
ಕೊನೆವರೆಗ್ ಇರ್ತೀನಿ ಅಂದೋರೇ ಇಲ್ಲ
ಇದ್ದಾಗ ಮುಖವಾಡ ಗೊತ್ತಾಗಲ್ಲ
ಬಿದ್ದಾಗ ಯಾರು ಮೇಲೆ ಎತ್ತೋದಿಲ್ಲ
ಅಂಥೋರು ಹೋದ್ರೆ care ಮಾಡಬೇಕಾಗಿಲ್ಲ
Life ಅಲ್ಲಿ double game ಆಡೋರೆಲ್ಲ
ನಂಗೆ ಆಟಕುಂಟು ಲೆಕ್ಕಕ್ ಇಲ್ಲ
ಭೂಮಿ ಮೇಲ್ ಸ್ವಾರ್ಥನೇ, ಬೇರೇನೂ ಇಲ್ಲ
ನಂಗೊತ್ತು ಯಾವದೂನೂ ಶಾಶ್ವತವಲ್ಲ
ಒಳಗೊಂದು ಹೊರಗೊಂದು ನಾಟ್ಕ ಮಾಡೋರ್ನೆಲ್ಲ
ದೂರ ಇಡು ಇಲ್ಲ ದೂರ ಇರು
ಅಲ್ಲೊಂದು ಇಲ್ಲೊಂದು ತಂದ್ ಇಡೋರ್ನೆಲ್ಲ
ನೀನ್ ಅಲ್ಲೇ ಇಡು, ಬಾಗ್ಲಲ್ಲೇ ಬಿಡು
ಬೆನ್ನ ಹಿಂದೆ ಬೈಕೊಳೋ ಮಾತುಗಳು
ನಿಂಗೆ ಕೇಳುಸುದ್ರು ಕೇಳಿಸದಂಗೆ ಇರು
ಕಣ್ಣ ಮುಂದೆ ನಡಿಯೋ dramaಗಳು
ನಿಂಗೆ ಕಾಣಸುದ್ರೂ, ಕಾಣಸ್ದಂಗೆ ಇರು
ಯಾಕ್ ಗೊತ್ತಾ ಯಾವಾಗಲೂ ನಂಬಬಾರದು ಯಾರನೂ?
ಹೊಟ್ಟೆ ಕಿಚ್ಚು ಅನ್ನೋದು ಬಿಟ್ಟಿಲ್ಲ ಯಾರನೂ
ಬೇರೆ ಅವ್ರು ಚೆನ್ನಾಗ್ ಇರ್ಲಿ ಅಂತ ಅನ್ಕೊಳೋದು ನಾನು
ನನ್ನ ಬುಡಕ್ಕೆ ಬರೋದು ಕೊನೆಗೆ ಎಲ್ಲಾನೂ
ನಾವು ಎಷ್ಟೇ ನಿಯತ್ತಾಗಿದ್ರುನೂ
ದೇವ್ರುದು ಬೇರೆ ಇರುತ್ತೆ plan
ಹುಟ್ಟಿದಾಗಿಂದ ಮತ್ತೆ ಸಾಯೋವರೆಗೂನು
ಸುತ್ತ ಜನ ಇದ್ರೂ ಒಬ್ಬನೇ ನೀನು
ಬಂದಿದ್ದು ಒಬ್ಬನೇ, ಹೋಗೋದು ಕೂಡ ನೀನೊಬ್ಬನೇ
ಅವ್ನಿವ್ನು ಬರ್ತಾನೆ, ಕೆಲ್ಸ ಆಗೋವರೆಗು ಇರ್ತಾನೆ
ಕಚಡ ವರ್ತನೆ, ಮಾಡಿಕೊಳ್ಳೋದು ಸಮರ್ಥನೆ
ಮನಸ್ಸಿನ ಯಾತನೆ ಬಿಟ್ಟಾಕಿ ನೀ ಮಾಡು ಪ್ರಾರ್ಥನೆ
ಬಂದಿದ್ದು ಒಬ್ಬನೇ, ಬಂದಿದ್ದು ನೀನಿಲ್ಲಿಗ್ ಒಬ್ಬನೇ
ಹೋಗೋದು ಒಬ್ಬನೇ, ಹೋಗೋದು ಕೂಡ ನೀನೊಬ್ಬನೇ
ಬಂದಿದ್ದು ಒಬ್ಬನೇ, ಬಂದಿದ್ದು ನೀನಿಲ್ಲಿಗ್ ಒಬ್ಬನೇ
ಹೋಗೋದು ಒಬ್ಬನೇ, ಹೋಗೋದು ಕೂಡ ನೀನೊಬ್ಬನೇ

Поcмотреть все песни артиста

Sanatçının diğer albümleri

Benzer Sanatçılar