Kishore Kumar Hits

Midhun Mukundan - Kanasina - Remix şarkı sözleri

Sanatçı: Midhun Mukundan

albüm: Srinivasa Kalyana (Original Motion Picture Soundtrack)


ಕನಸಿನ ಕೀಲಿ ಕಳೆದರೆ
ನೆನಪಿನ ದಾಳಿ ನಡೆದರೆ
ಇರಲಿ ಹೇಗೆ ನಾನು
ದಿನಚರಿ ಖಾಲಿ ಉಳಿದರೆ
ಪರಿಚಿತ ಗಾಳಿ ಸುಳಿದರೇ
ಇರಲಿ ಹೇಗೆ ನಾನು
ಹೋಗಿ ಹೇಳಿ ಬಿಡಿ ಆಕೆಗೆ
ಹೃದಯವಲ್ಲ ಬರಿ ಆಟಿಗೆ
ಕನಸಿನ ಕೀಲಿ ಕಳೆದರೆ
ನೆನಪಿನ ದಾಳಿ ನಡೆದರೆ
ಇರಲಿ ಹೇಗೆ ನಾನು
ತುಟಿಯಲೇ ಮಾತು ತಡೆದಿದೆ
ಗ್ರಹಣವು ಬೇಗ ಬಿಡುವುದೇ
ನೀನು ಈಗಷ್ಟೇ ಬಂದು ಹೋದಂತೆ
ಹೋದ ಹೋದಲ್ಲಿ ನಿನ್ನದೇ ರೂಪ
ಸಂತೆಯಲ್ಲೂನು ಒಂಟಿ ಜೀವಕ್ಕೆ
ನೇರ ನಿನ್ನಲ್ಲೇ ಮೂಕ ಸಲ್ಲಾಪ
ಕನಸಿನ ಕೀಲಿ ಕಳೆದರೆ
ನೆನಪಿನ ದಾಳಿ ನಡೆದರೆ
ಇರಲಿ ಹೇಗೆ ನಾನು
ಸಮಯವೇ ನಿಲ್ಲು ಚಲಿಸದೇ
ಬಯಕೆಯ ಬಳ್ಳಿ ಚಿಗುರಿದೆ
ಮತ್ತೆ ಒಂದಾಗೋ ಆಸೆ ಇಂದಾನೆ
ಹೇಗೋ ಇದ್ದಲ್ಲೇ ನಾನು ಜೀವಂತ
ಹೆಚ್ಚು ಮಾತೇಕೆ ಹುಚ್ಚು ಬಂತೀಗ
ಬೇಗ ನಿನ್ನನ್ನು ನೋಡಬೇಕಂತ
ಕನಸಿನ ಕೀಲಿ ಕಳೆದರೆ
ನೆನಪಿನ ದಾಳಿ ನಡೆದರೆ
ಇರಲಿ ಹೇಗೆ ನಾನು

Поcмотреть все песни артиста

Sanatçının diğer albümleri

Benzer Sanatçılar