ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಊರ ದಾರಿ ಬೀಸೋ ಗಾಳಿ ಹೇಳುತಲಿವೆ ನವಿರಾದ ಕಥೆಯೊಂದನು ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿಯ ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಊರ ದಾರಿ ಬೀಸೋ ಗಾಳಿ ನಿನ್ನ ಸೇರಿ ಪ್ರೀತಿ ಛಾಳಿ ಹೂವೆದೆಯಲಿ ಜೇನು ಅನುಭವಿಸದೆ ತಾನು ದುಂಬಿಗೆ ತಾ ನೀಡೋ ವಾತ್ಸಲ್ಯವೇ ಪ್ರೀತಿ ಮಣ್ಣೊಳಗಿನ ಬೇರು ಕುಡಿಯದೆ ತಾ ನೀರು ಚಿಗುರೆಲೆಗೆ ಉಣಿಸೋ ತ್ಯಾಗವದೇ ಪ್ರೀತಿ ♪ ಎಲ್ಲವ ಕೊಡುವ ದೇವರ ಕೂಡ ಸೋಲಿಸಿಬಿಡುವ ಸೋಜಿಗ ಪ್ರೀತಿ ಸುತ್ತಲು ಇರುವ ಲೋಕವನೆಲ್ಲಾ ಮರೆಸುವುದದರ ಅದ್ಭುತ ರೀತಿ ಒಲವಿನ ನಿಧಿಯನೆ ಕಸಿದರೆ ನೀ ಹೀಗೆಯೇ ಏನನು ಮಾಡಲಿ ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಊರ ದಾರಿ ಬೀಸೋ ಗಾಳಿ ಹೇಳುತಲಿವೆ ನವಿರಾದ ಕಥೆಯೊಂದನು ನೂರಾರು ಹೆಸರಿರದ ಸವಿ ಭಾವನೆಗಳ ಹೆಸರಾಂತ ಸಂಕಲನ ಪ್ರೀತಿಯ ಎಂದೋ ಬರೆದ ಕವಿತೆ ಸಾಲು ಬೊಗಸೆ ಹಿಡಿದ ಮಳೆಯ ನೀರು ಹೂವೆದೆಯಲಿ ಜೇನು ಅನುಭವಿಸದೆ ತಾನು ದುಂಬಿಗೆ ತಾ ನೀಡೋ ವಾತ್ಸಲ್ಯವೇ ಪ್ರೀತಿ ಮಣ್ಣೊಳಗಿನ ಬೇರು ಕುಡಿಯದೆ ತಾ ನೀರು ಚಿಗುರೆಲೆಗೆ ಉಣಿಸೋ ತ್ಯಾಗವದೇ ಪ್ರೀತಿ