ಬಾನ ತೊರೆದು ನೀಲಿ ಮರೆಯಾಯಿತೇತಕೆ? ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ? ♪ ಭಾವ ತೊರೆದು ಹಾಡು ಬದಲಾಯಿತೇತಕೆ? ತಲುಪಿತೆ ಈ ಮೌನ ನಿನ್ನೆದೆಯ ತೀರಕೆ? ಈಗ ಬರುವೆನೆಂದು ಮರೆಯಾದ ಜೀವವೇ ನನಗೂ, ನಿನಗೂ ನೆನೆಪೊಂದೆ ಈಗ ಸೇತುವೆ ಬಾನ ತೊರೆದು ನೀಲಿ ಮರೆಯಾಯಿತೇತಕೆ? ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ? ಆ, ಆ, ಆ, ಆ... ♪ ಕಟ್ಟುತ ನಾವು ಬೆರಳಿನಿಂದ ಮರಳ ಗೂಡು ಕಾಣದ ಅಲೆಗೆ ಅಳಿಸಿ ಹೋಯಿತು ಎಲ್ಲ ನೋಡು ಜೀವದ ಜೋಗುಳ ಮಾಯವೇ ಆಗಿದೆ ಅರೆ, ನೀನೇ ನಡುರಾತ್ರೆ ಕರೆದಂತೆ ಭಾಸವಾಗಿದೆ ಬಾನ ತೊರೆದು ನೀಲಿ ಮರೆಯಾಯಿತೇತಕೆ? ಕರಗಿತೆ ಈ ಮೋಡ ನಿಟ್ಟುಸಿರ ಶಾಖಕೆ? ಈಗ ಬರುವೆನೆಂದು ಮರೆಯಾದ ಜೀವವೇ ನನಗೂ, ನಿನಗೂ ನೆನೆಪೊಂದೆ ಈಗ ಸೇತುವೆ