(And darling, I will pile
All the wild flowers of the mountain
And darling, I will pile
All the wild flowers of)
ಮುಗಿಲು, ಬೆಳ್ಮುಗಿಲು, ನನ್ನ ಈ ಮಗಳು, ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರ ಅವಳ ನೆರಳು, ಕಣ್ಣಲೇ ಇದೆ ಹೊಂಬಿಸಿಲು
ಉಸಿರೇ ಇಲ್ಲಿ ಲಾಲಿ, ಅಪ್ಪುಗೆಯೇ ತೂಗೋ ಜೋಲಿ
ಬದುಕಿನಲ್ಲಿ ಅವಳೇ ಭರವಸೆಯ ಹೋಲಿ
ಮರವ ತಬ್ಬಿದ ಬಿಳಲು, ಗರಿಯ ಹಬ್ತಿದ ನವಿಲು
ನನ್ನ ಹಗಲು, ನನ್ನ ಇರುಳು
ಮಗಳು, ನನ್ನ ಮಗಳು
♪
ನಗುವು, ಅಳುವು, ಏನಿರಲಿ, ನಿನ್ನ ಜೊತೆ ಇರುವೆ
ಬಿಟ್ಟೂ ಬಿಡದ ಕೋರಿಕೆಯ ಬಿಡದೇ ತೀರಿಸುವೆ
ಮೊದಲ ಮಾತು, ಮೃದುಲ ನಡಿಗೆ, ಹುಸಿಯ ಕೋಪ ನಿನ್ನ ಗುರುತು
ಉಸಿರಾಗಿರುವೆ, ಜೋ-ಜೋ, ಲಾಲಿ, ಜೋ-ಜೋ (ಜೋ-ಜೋ, ಲಾಲಿ, ಜೋ-ಜೋ)
ನಾನು ನಿನ್ನಡಿ ಆಳು, ನಿನ್ನ ಪಾದದ ಧೂಳು
ನನ್ನ ಮಡಿಲು, ನನ್ನ ಹೆಗಲು
ಮಗಳು, ನನ್ನ ಮಗಳು
♪
(All the white flowers of)
Поcмотреть все песни артиста