ಗುನು ಗುನುಗುವ ಹಾಡಿನಂತೆ ಎದೆಯೊಳಗಡೆ ನೀನು ನಿಂತೇ ಬದಿ ಸರಿಸಿದೆ ಬೇರೆ ಚಿಂತೆ ನನ್ನ ಜಗವಿನ್ನು ನೀನೆಯಂತೆ ನೀ ಜೊತೆ ಇರುವಾಗ ಯಾಕೆ ನಂಗೆ ಹಿಂಗೆ ಎಲ್ಲವಾ ಗೆಲುವಂತ ಹುಮ್ಮಸ್ಸು ಪರಿ ಪರಿ ಶರಣಾದೆ ನಾನು ನಿಂಗೆ ಅದು ಯಾಕೋ ಅದು ಯಾಕೋ ♪ ನಿನ್ನೊಂದಿಗೆ ಇರೋ ಎಲ್ಲಾ ಕ್ಷಣ ಹಿತವಾಗಿದೆ ನನಗೀ ಜೀವನ ಹೇಗಾದರೂ ನನಗೊಂದು ಸಲ ಸಿಗಬಾರದೆ ನಿನ್ನ ಆಲಿಂಗನ ಎಲ್ಲಿಗೋ ಎಳೆದೊಯ್ಯೋ ಗಾಳ ಹಾಗೆ ನನ್ನ ಮೆಲ್ಲನೆ ಸೆಳೆಯೋದು ಹೀಗೇಕೆ ನಿನ್ನನು ಕೆಣಕೋಕೆ ಅಸೆ ನಂಗೆ ಅದು ಯಾಕೋ ಅದು ಯಾಕೋ ಅದು ಯಾಕೋ ♪ ಮಾತಿಲ್ಲದ ಸವಿ ಸಂಭಾಷಣೆ ನಡೆಸೋಕೆಲೇ ನಿನಗೆ ಗೊತ್ತಿದೆ ಇನ್ನೇತಕೆ ಬಿಡು ಆಶ್ವಾಸನೆ ನನ ಜೀವವು ನಿನದೆ ಆಗಿದೆ ಯಾವುದೇ ಅನುಮಾನ ಇಲ್ಲ ನಂಗೆ ಇನ್ನು ನನ್ನಾಯ ಜೊತೆಗಾರ ನೀನೇ ಎಲ್ಲವ ಬಿಡಬಲ್ಲೆ ಇನ್ನು ನಾನು ನಿನಗಾಗಿ ನಿನಗಾಗಿ ಗುನು ಗುನುಗುವ ಹಾಡಿನಂತೆ ಎದೆಯೊಳಗಡೆ ನೀನು ನಿಂತೇ ಬದಿ ಸರಿಸಿದೆ ಬೇರೆ ಚಿಂತೆ ನನ್ನ ಜಗವಿನ್ನು ನೀನೆಯಂತೆ ಗುನು ಗುನುಗುವ ಹಾಡಿನಂತೆ ಎದೆಯೊಳಗಡೆ ನೀನು ನಿಂತೇ ಬದಿ ಸರಿಸಿದೆ ಬೇರೆ ಚಿಂತೆ ನನ್ನ ಜಗವಿನ್ನು ನೀನೆಯಂತೆ