ಮಡಿಲಿನಲ್ಲಿ ಕಡಲಿನಷ್ಟು ಹನಿಗಳಿದ್ದರು ತೊಲಗದಾ, ದಾಹ
ಎದೆಗೆ ಬಡಿದಾ ಸಿಡಿಲ ಭಾರ, ಬದುಕೆ ನೀನು ತೀರ ಕ್ರೂರ
ಕರಗುತಿರುವ ಪ್ರಾಣ ಹಿಡಿದು ಅಂಗಲಾಚಿ ನಿಂತೇ ಸ್ವತಃ
ತಡೆಯಲಾಗದ ಈ ಪ್ರಹಾರ, ಸೂತ್ರಧಾರನ ಜೊತೆಗೆ ಸಮರ
ನಗೋ ನಗೋ ಈ ಸ್ಥಿತಿಯಲ್ಲಿ ನೀನೊಂದು ಕ್ಷಣ ಬದುಕೋ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ
ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು
ಯಾರು ಇದಕೆ ಹೊಣೆಯೋ ಯಾರು ಬಯಸದ ಕೊನೆಯೋ
ತ್ಯಜಿಸುವೆ ಶಪಿಸುವೆ ಕ್ಷಮೆ
ಇರದ ಬರವಣಿಗೆ
ಬಾಡಿ ಹೋದ ಈ ಕೊರಳ ಪದಕ ಕಾಲ ನೀನೆ ಇಲ್ಲಿ ಕಡು ವಂಚಕ
ಕಣ್ಣು ನೆಂದೋಗಿದೆ ತುಂಬ ನೊಂದಾಗಿದೆ
ನೋವು ನುಂಗುತ್ತಲೆ ಜೀವ ಇಂಗುತ್ತಿದೆ
ಬೀಳುವ ಎಲೆಯದು ಭಾವಾತ್ಮಕ ಪ್ರಾರ್ಥನೆ
ಉಸಿರೊಂದಿದೆ ನನಗಾಗಿಯೇ ಹೇಗೊ ಪಾರು ಮಾಡು ಬೇಗನೆ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ
ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು
ಯಾವ ಮೋಡದ ಹನಿಯೋ ಯಾವ ದಡದ ದನಿಯೋ
ತರಲಿದೆ ವರ ಭರವಸೆ ನಿಸ್ವಾರ್ಥ ಜೀವಕ್ಕೆ
ಮರೆತಾಗೋಗಿದೆ ಎಂದೊ ನಗಲು
ಹೊರೆ ಹೆಚ್ಚಾಗಿದೆ ಮುಂದೆ ಸಾಗಲು
ಕೊಟ್ಟು ಕಿತ್ತುಕೊಳ್ಳೋ ನಿಂದು
ಎಂತಾ ನೀತಿ
ಎದೆ ಚಿತೆಯಲಿ ನಂಬಿಕೆ ಆಹುತಿ
ನನ್ನಯ ಆಯಸ್ಸನು ಬೇಕಾದರೆ ವರ್ಗಾಯಿಸು
ಪ್ರಾಮಾಣಿಕ ಜೀವಾಳವ ದಯವಿಟ್ಟು ಹೇಗೋ ಉಳಿಸು
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು ಭುಗಿಲೆದ್ದ
ಹೃದಯಕೆ ಸಾಂತ್ವನ
ಕೊಡಿಸು ಕೊಡಿಸು ಕಿಂಚಿತ್ತು
ಕರುಣೆಯ ಅಂಕನ
ಬಡಿಸು ಬಡಿಸು
Поcмотреть все песни артиста
Sanatçının diğer albümleri