Manoj George - Thili Prema - Guitar Version şarkı sözleri
Sanatçı:
Manoj George
albüm: Urvi (Original Motion Picture Soundtrack)
ತಿಳಿ ಪ್ರೇಮಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಸೋತಾಯ್ತು ಪ್ರೀತಿ ಎದುರೀಗ
ಹೊಸದಾಯಿತು ಜೀವನ
ಹಾಡಾಯ್ತು ಪ್ರತಿ ಮಾತೀಗ
ಹಿತವಾಗಿದೆ ಮೌನ
ತಿಳಿ ಪ್ರೇಮಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ಏನೋ ಹೇಳೋ ನೆಪದಲ್ಲಿ
ನನ್ನೇ ನೋಡೋ ಪರಿಯೇಕೇ?
ಹೊಳೆವ ಮಿಂಚು ಮೊಗದಲ್ಲಿ
ಚಿಮ್ಮಿ ನಗುವೇ ಹೀಗೇಕೆ?
ಹೃದಯದ ತುಂಬೆಲ್ಲ ಸ್ವರಗಳ ಸಂಚಾರ
ಮೃದುವಾದ ಮಾತಲ್ಲಿ ಶ್ರುತಿಗಳ ಶೃಂಗಾರ
ಪ್ರೀತಿ ದೈವಾನುಸಂಧಾನ
ತಿಳಿ ಪ್ರೇಮಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಮಿಂಚಿ ಮಿನುಗೊ ಚೆಂದುಟಿಯೂ
ಹೊಂಚು ಹಾಕಿ ಕರೆದಂತೆ
ಸಂಚು ಮಾಡೋ ಸುಳಿಗಣ್ಣು
ಹಿಡಿದು ನನ್ನಾ ಸೆಳೆದಂತೆ
ಇನ್ನೆಂದು ನಾ ಕಾಣೋ ಕನಸೆಲ್ಲ ನಿಂದೇನೆ
ಮುಂದೆಂದೂ ನನ್ನಾಳೋ ಒಡೆಯನು ನೀನೇನೆ
ಪ್ರೀತಿ ಮಧುರಾನುಸಂಧಾನ
ತಿಳಿ ಪ್ರೇಮಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
ತುಸು ನಕ್ಕು ಪುಟ್ಟ ಕಣ್ಣ ಕಾಂತಿ ಮಾತಾಡಿ
ಮನ ತನ್ನ ತಾನೆ ಮರೆತು ಹಾಡಿ ಹಾರಾಡಿ
ಸೋತಾಯ್ತು ಪ್ರೀತಿ ಎದುರೀಗ
ಹೊಸದಾಯಿತು ಜೀವನ
ಹಾಡಾಯ್ತು ಪ್ರತಿ ಮಾತೀಗ
ಹಿತವಾಗಿದೆ ಮೌನ
ತಿಳಿ ಪ್ರೇಮಕಾವ್ಯ ಮೂಡಿ ಮೋಹ ಮೈಗೂಡಿ
ಹನಿ ಮೂಡಿ ಮೋಡ ತಂಪ ಬೀಸಿ ಮುದ್ದಾಡಿ
Поcмотреть все песни артиста
Sanatçının diğer albümleri